ದುಬೈನಲ್ಲಿ 86 ಮಹಡಿಗಳ ಟಾರ್ಚ್ ಟವರ್ ಧಗಧಗ

ಈ ಸುದ್ದಿಯನ್ನು ಶೇರ್ ಮಾಡಿ

Dubai--01

ದುಬೈ, ಆ.4-ದುಬೈನಲ್ಲಿರುವ ವಿಶ್ವದ ಅತ್ಯಂತ ಎತ್ತರದ ವಸತಿ ಗೋಪುರಗಳಲ್ಲಿ ಒಂದಾದ ಗಗನಚುಂಬಿ ಕಟ್ಟಡವೊಂದರಲ್ಲಿ ನಿನ್ನೆ ಮಧ್ಯರಾತ್ರಿ ಬೆಂಕಿ ಕಾಣಿಸಿಕೊಂಡು ಒಂದು ಭಾಗ ಧಗಧಗನೆ ಹೊತ್ತಿ ಉರಿಯಿತು. ಅದೃಷ್ಟವಶಾತ್ ಈ ಅಗ್ನಿ ಆಕಸ್ಮಿಕದಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ.
86 ಅಂತಸ್ತುಗಳ ಟಾರ್ಚ್ ಟವರ್‍ನ 40 ಮತ್ತು ಅದಕ್ಕೆ ಮೇಲ್ಪಟ್ಟ ಮಹಡಿಗಳ ಒಂದು ಭಾಗ ಬೆಂಕಿಗೆ ಆಹುತಿಯಾಯಿತು. ಮುಂಜಾನೆ 1ರ ಸುಮಾರಿನಲ್ಲಿ ಬೆಂಕಿ ಕಾಣಿಸಿಕೊಂಡಿತು.


ಆಗ್ನಿ ಕೆನ್ನಾಲಗೆ ಆಪೋಶನ ತೆಗೆದುಕೊಳ್ಳುವ ಮುನ್ನವೇ ನಿವಾಸಿಗಳ ಎಚ್ಚೆತ್ತ ಕಾರಣ ಭಾರೀ ಅನಾಹುತ ತಪ್ಪಿದಂತಾಗಿದೆ.
ಸುದ್ದಿ ತಿಳಿದ ಕೂಡಲೇ ಅಗ್ನಿಶಾಮಕ ವಾಹನಗಳೊಂದಿಗೆ ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಸುಮಾರು ಎರಡು ಗಂಟೆಗಳ ಕಾಲ ಶ್ರಮಿಸಿ ನಸುಕಿನಲ್ಲಿ 3.30ರ ವೇಳೆಗೆ ಬೆಂಕಿಯನ್ನು ನಂದಿಸಿದರು. ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ದುಬೈನ ನಾಗರಿಕ ರಕ್ಷಣಾ ಇಲಾಖೆ ತಿಳಿಸಿದೆ. ಮುಗಿಲಚುಂಬಿ ಕಟ್ಟಡದ ಒಂದು ಪಾಶ್ರ್ವ ಹಾನಿಗೀಡಾಗಿದ್ದು, ಗಣನೀಯ ಪ್ರಮಾಣದ ನಷ್ಟ ಉಂಟಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin