ನಮ್ಮ ಸಂಯಮದ ಕಟ್ಟೆಯೊಡೆದಿದೆ : ಭಾರತಕ್ಕೆ ಚೀನಾ ಮತ್ತೆ ಎಚ್ಚರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

China--01

ಬೀಜಿಂಗ್/ನವದೆಹಲಿ, ಆ.4-ಈಶಾನ್ಯ ರಾಜ್ಯ ಸಿಕ್ಕಿಂ ವಲಯದ ಡೋಕ್ಲಾಮ್‍ನಲ್ಲಿ ಭಾರತದೊಂದಿಗೆ ಭುಗಿಲೆದ್ದಿರುವ ದೀರ್ಘ ಸೇನಾ ಸಂಘರ್ಷ ಕುರಿತು ಚೀನಾ ಮತ್ತೊಮ್ಮೆ ಎಚ್ಚರಿಕೆ ನೀಡಿದೆ.  ಈ ವಿವಾದ ಬಗೆಹರಿಸಿಕೊಳ್ಳಲು ಚೀನಾ ಗರಿಷ್ಠ ಸದ್ಭಾವ ಪ್ರದರ್ಶಿಸಿದೆ. ಆದರೆ ಭಾರತ ತನ್ನ ನಿಲುವಿಗೆ ಅಂಟಿಕೊಂಡಿರುವುದರಿಂದ ತನ್ನ ಸಹನೆಯ ಕಟ್ಟೆಯೊಡೆದಿದೆ ಎಂದು ಬೀಜಿಂಗ್ ಹೇಳಿದೆ.   ಡೋಕ್ಲಾಮ್ ವಿವಾದ ಇತ್ಯರ್ಥಕ್ಕೆ ಯುದ್ಧವೇ ಮಾರ್ಗವಲ್ಲ. ಮಾತುಕತೆಯಿಂದ ಮಾತ್ರ ಇದನ್ನು ಬಗೆಹರಿಸಿಕೊಳ್ಳಬೇಕು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ರಾಜ್ಯಸಭೆಯಲ್ಲಿ ನಿನ್ನೆ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಚೀನಾ ರಕ್ಷಣಾ ಸಚಿವಾಲಯ, ಭಾರತವು ಡೋಕ್ಲಾಮ್ ಪ್ರಸ್ಥಭೂಮಿಯಿಂದ ತನ್ನ ಸೇನಾಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು. ಇಲ್ಲದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಪುನರ್ ಎಚ್ಚರಿಕೆ ನೀಡಿದೆ.

ದೆಹಲಿ ವರದಿ :

ಮಾತುಕತೆಗೆ ಸಿದ್ಧವಿರುವುದಾಗಿ ಭಾರತ ಹೇಳಿಕೆ ನೀಡಿದ ನಂತರವೂ ಕದನೋತ್ಸಾಹದಿಂದ ಮತ್ತೆ ಬಡಬಡಿಸುತ್ತಿರುವ ಚೀನಾ ವರ್ತನೆಗೆ ವಿದೇಶಾಂಗ ಸಚಿವಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.  ಸುಷ್ಮಾ ಸ್ವರಾಜ್ ಹೇಳಿಕೆ ನೀಡಿದ ನಂತರ ಡೋಕ್ಲಾಮ್ ಗಡಿಯಲ್ಲಿ ಚೀನಾ ಸೇನೆಯ ಜಮಾವಣೆ ಇಳಿಮುಖವಾಗುತ್ತದೆ ಎಂಬುದನ್ನು ನಿರೀಕ್ಷಿಸಿದ್ದ ಭಾರತಕ್ಕೆ ಚೀನಾದ ಈ ಗೊಡ್ಡು ಬೆದರಿಕೆ ಮತ್ತಷ್ಟು ಕೆರಳಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin