ಪಾಕ್ ನೂತನ ಪ್ರಧಾನಿ ಶಾಹಿದ್ ಖಾನ್ ಅಬ್ಬಾಸಿ ನೇತೃತ್ವದ ಸಂಪುಟ ಅಸ್ತಿತ್ವಕ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

Pak-PM--01

ಇಸ್ಲಾಮಾಬಾದ್, ಆ.4-ಪಾಕಿಸ್ತಾನದ ನೂತನ ಪ್ರಧಾನಮಂತ್ರಿ ಶಾಹಿದ್ ಖಾನ್ ಅಬ್ಬಾಸಿ ನೇತೃತ್ವದ ಸಂಪುಟ ಇಂದು ಪ್ರಮಾಣ ವಚನ ಸ್ವೀಕರಿಸಿದೆ. ರಾಜಧಾನಿ ಇಸ್ಲಾಮಾಬಾದ್‍ನ ರಾಷ್ಟ್ರಾಧ್ಯಕ್ಷರ ಸದನದಲ್ಲಿ ಇಂದು ನಡೆದ ಸಮಾರಂಭದಲ್ಲಿ ಅಧ್ಯಕ್ಷ ಮಮೂನ್ ಹುಸೇನ್ ಸಂಪುಟದ ಹೊಸ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದರು.  ನೂತನ ಮಂತ್ರಿಮಂಡಲದಲ್ಲಿ ಹಳಬರಿಗೆ ಪ್ರಾಶಸ್ತ್ಯ ಲಭಿಸಿದೆಯಾದರೂ ಸಚಿವರು ಮತ್ತು ಸಹಾಯಕ ಸಚಿವರಾಗಿ ಹೊಸಬರಿಗೆ ಅವಕಾಶ ನೀಡಲಾಗಿದೆ. ಖ್ವಾಜಾ ಆಸೀಫ್ ವಿದೇಶಾಂಗ ವ್ಯವಹಾರ ಸಚಿವರಾಗಿ ನೇಮಕಗೊಂಡಿದ್ದಾರೆ. 2013ರ ಬಳಿಕ ಪಾಕಿಸ್ತಾನ ಪೂರ್ಣಪ್ರಮಾಣದ ವಿದೇಶಾಂಗ ಮಂತ್ರಿಯನ್ನು ಹೊಂದುವಂತಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin