ಫುಟ್ಬಾಲ್ ಸ್ಟಾರ್ ನೈಮಾರ್‍ಗೆ ಬೊಂಬಾಟ್ ಆಫರ್…!

ಈ ಸುದ್ದಿಯನ್ನು ಶೇರ್ ಮಾಡಿ

Nymar--01

ಬ್ರೆಜಿಲ್, ಆ.4- ಬ್ರೆಜಿಲ್‍ನ ಫುಟ್ಬಾಲ್ ತಾರೆ ನೈಮಾರ್‍ಗೆ ಈಗ ಬೊಂಬಾಟ್ ಆಫರ್ ಸಿಕ್ಕುವ ಮೂಲಕ ಅತಿರಥ ಮಹಾರಥ ಫುಟ್ಬಾಲ್ ಆಟಗಾರರನ್ನೇ ನಿಬ್ಬೆರಗೊಳಿಸಿದ್ದಾರೆ. ಇಂದು ಮಾಡಿಕೊಂಡ ಒಪ್ಪಂದ ಪ್ರಕಾರ ನೈಮಾರ್ ಫ್ರೆಂಚ್ ಕ್ಲಬ್‍ನ ಪ್ಯಾರಿಸ್ ಸೈನ್- ಜರ್ಮಿನ್ (ಪಿಎಸ್‍ಜಿ) ತಂಡದ ಪರ 5 ವರ್ಷಗಳ ಕಾಲ ಆಡಲು ಬರ್ಸಿಲೋನಾದ ಆಟಗಾರ ಪಡೆದದ್ದು 200 ದಶಲಕ್ಷ ಪೌಂಡ್. ಅಂದರೆ ಭಾರತದ ರೂಪಾಯಿ ಮೌಲ್ಯ 16,730 ಕೋಟಿ…! ಈ ಮುನ್ನ ಫ್ರೆಂಚ್ ದೇಶದ ಫುಟ್ಬಾಲಿಗ ಪೋಲ್ ಪೋಗ್‍ಬಾ ಅವರು ಕಳೆದ 2016 ಆಗಸ್ಟ್‍ನಲ್ಲಿ ಮ್ಯಾನ್‍ಚೆಸ್ಟರ್ ಯುನೈಟೆಡ್ ತಂಡದ ಪರ ಆಡಲು 89 ದಶಲಕ್ಷ ಪೌಂಡ್‍ಗಳನ್ನು ಪಡೆದಿದ್ದು ದಾಖಲೆಯಾಗಿತ್ತು. ಈಗ ನೈಮಾರ್ 200 ದಶಲಕ್ಷ ಪೌಂಡ್‍ಗಳ ಸಂಭಾವನೆಯನ್ನು ಪಡೆಯುವ ಮೂಲಕ ನೂತನ ವಿಶ್ವದಾಖಲೆಯನ್ನು ನಿರ್ಮಿಸಿದ್ದಾರೆ.

ನೈಮಾರ್ ತಮ್ಮ ಪುಟ್ಭಾಲ್‍ನ ಇತಿಹಾಸದಲ್ಲಿ ಒಂದು ಬಾರಿ ಚಾಂಪಿಯನ್ಸ್ ಲೀಗ್, ಎರಡು ಬಾರಿ ಲಾ ಲಿಗಾ, ಮೂರು ಬಾರಿ ಕೋಪಾ ಡೆಲ್ ರೇ ಮತ್ತು ಫಿಫಾ ವಿಶ್ವಕಪ್ ಅನ್ನು ತಾನು ಪ್ರತಿನಿಧಿಸಿದ ತಂಡ ಗೆಲ್ಲುವಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ. 2018ರಲ್ಲಿ ನಡೆಯಲಿರುವ ಯುಫಾ ಚಾಂಪಿಯನ್ಸ್ ಲೀಗ್‍ನಲ್ಲಿ ತಮ್ಮ ತಂಡವನ್ನು ಗೆಲ್ಲಿಸಿಕೊಳ್ಳುವುದಕ್ಕಾಗಿ ನೈಮರ್‍ಗೆ ದಾಖಲೆ ಮೊತ್ತದ ಹಣವನ್ನು ನೀಡಿ ಬಾರ್ಸಿಲೋನಾ ತಂಡವು ಖರೀದಿಸಿದೆ.

ನೈಮಾರ್ ಪ್ರತಿಕ್ರಿಯೆ:

ನನಗೆ ಇಂದಿನಿಂದ ನೂತನ ಚಾಲೆಂಜ್ ಒಂದು ಸಿಕ್ಕಿದೆ. ನಾನು ನೂತನವಾಗಿ ಪ್ರತಿನಿಧಿಸುತ್ತಿರುವ ಪ್ಯಾರಿಸ್ ಸೆಂಟ್- ಜರ್ಮಿನ್ ತಂಡದಲ್ಲಿರುವ ಸಹ ಆಟಗಾರರ ಸಹಾಯದಿಂದ ತಂಡವನ್ನು ಬಲಿಷ್ಠಗೊಳಿಸಲು ಪ್ರಯತ್ನಿಸುತ್ತೇನೆ. ನನಗೆ ದಾಖಲೆಯ ಮೊತ್ತ ಸಿಕ್ಕರುವುದು ತುಂಬಾ ಸಂತಸ ತಂದಿದೆ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಟಾಪ್ 10 ಆಟಗಾರರು:

ಫುಟ್ಬಾಲ್ ಇತಿಹಾಸದಲ್ಲೇ ಅತಿ ಹೆಚ್ಚು ಸಂಭಾವನೆಯನ್ನು ಪಡೆದ ಟಾಪ್ 10 ಪುಟ್ಭಾಲಿಗರ ಪಟ್ಟಿ ಕೆಳಕಂಡಂತಿದೆ.
ಪೌಲ್ ಪೋಗ್ಬಾ-89 ದಶಲಕ್ಷ ಪೌಂಡ್
ಗ್ರೇತ್ ಬಾಲೆ-85ದಶಲಕ್ಷ ಪೌಂಡ್
ಕ್ರಿಸ್ಟಿನೊ ರೊನಾಲ್ಡೊ-80 ದಶಲಕ್ಷ ಪೌಂಡ್
ಗೋನ್‍ಜಾಲೋ ಹಿಗುಹಿನ್-75 ದಶಲಕ್ಷ ಪೌಂಡ್
ರೊಮಾಲೂ ಲುಕಕು-75ದಶಲಕ್ಷ ಪೌಂಡ್
ಲುಯಿಸ್ ಸುಯೆಜ್-75 ದಶಲಕ್ಷ ಪೌಂಡ್
ಜೇಮ್ಸ್ ರೊಡ್ರಿಗುಯಿಜ್-63 ದಶಲಕ್ಷ ಪೌಂಡ್
ಎಂಜೆಲ್ ಡಿ ಮರಿಯಾ- 60 ದಶಲಕ್ಷ ಪೌಂಡ್
ಎಲ್‍ವೆರೋ ಮೊರಾಟಾ- 60 ದಶಲಕ್ಷ ಪೌಂಡ್
ಕೆವಿನ್ ಡಿ ಬುನ್ರೈ-55 ದಶಲಕ್ಷ ಪೌಂಡ್
ಬ್ರೆಜಿಲ್ ತಂಡವನ್ನು ಪ್ರತಿನಿಧಿಸಿ 77 ಪಂದ್ಯಗಳಿಂದ 52 ಗೋಲ್‍ಗಳನ್ನು ಬಾರಿಸಿರುವ ನೈಮಾರ್ 200 ದಶಲಕ್ಷ ಪೌಂಡ್‍ಗಳನ್ನು 5 ವರ್ಷಗಳ ಒಪ್ಪಂದದ ರೂಪದಲ್ಲಿ ಪಡೆದಿರುವುದು ನೂತನ ವಿಶ್ವದಾಖಲೆಯಾಗಿ ವಿಜೃಂಭಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin