ರಾಜಸ್ತಾನ : ಭೀಕರ ರಸ್ತೆ ಅಪಘಾತದಲ್ಲಿ 7 ಮಹಿಳೆಯರ ದುರಂತ ಸಾವು

Accident--01

ಜೈಪುರ್, ಆ.4-ಜೀಪ್ ಮತ್ತು ಟ್ರೈಲರ್ ನಡುವೆ ಡಿಕ್ಕಿಯಾಗಿ ಏಳು ಮಹಿಳೆಯರು ಮೃತಪಟ್ಟು, ಇತರ ಆರು ಮಂದಿ ತೀವ್ರ ಗಾಯಗೊಂಡಿರುವ ಘಟನೆ ರಾಜಸ್ತಾನದ ಚಿತ್ತೊರ್‍ಗಢ್‍ನಲ್ಲಿ ಸಂಭವಿಸಿವೆ.  ಕರೌಲಿ ಜಿಲ್ಲೆಯ ಕೈಲಾ ದೇವಿ ಮಂದಿರ ಮತ್ತು ಚಿತ್ತೊರ್‍ಗಢ್‍ನ ಸನ್‍ವಾಲಿಯಾಜಿ ದೇವಸ್ತಾನದಲ್ಲಿ ಪೂಜೆ ಸಲ್ಲಿಸಿದ ನಂತರ ಅವರು ದುಂಗಾರ್‍ಪುರ್‍ಗೆ ತೆರಳುತ್ತಿದ್ದಾಗೆ ಈ ಅಪಘಾತ ಸಂಭವಿಸಿತು ಎಂದು ಪೊಲೀಸರು ತಿಳಿಸಿದ್ದಾರೆ.

ಮೃತಪಟ್ಟ ಏಳು ಮಹಿಳೆಯರು 35 ರಿಂದ 46ರ ವಯೋಮಾನದವರು. ಗಾಯಗೊಂಡ ಇತರ ಆರು ಮಹಿಳೆಯರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin