ಲೈಂಗಿಕ ಕಿರುಕುಳ : ಗಾಯಕ ಯಶ್ ವಾಡಾಲಿ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Singer--01

ಮುಂಬೈ, ಆ.4-ಮಹಿಳೆಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬಾಲಿವುಡ್ ಗಾಯಕ ಯಶ್ ವಾಡಾಲಿ ಜೈಲು ಪಾಲಾಗಿದ್ದಾರೆ. 39 ವರ್ಷದ ಮಹಿಳೆ ಈ ಸಂಬಂಧ ಮುಂಬೈನ ಬನಾಗೂರ್ ಠಾಣೆಗೆ ದೂರು ನೀಡಿದ್ರ ಹಿನ್ನೆಲೆಯಲ್ಲಿ ಗಾಯಕನನ್ನು ಬಂಧಿಸಲಾಗಿದೆ.  ಗೋರೆಗಾಂವ್ ವೆಸ್ಟ್‍ನಲ್ಲಿರುವ ತಮ್ಮ ನಿವಾಸದಲ್ಲಿ ಯಶ್ ವಾಡಾಲಿ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮಹಿಳೆ ಬುಧವಾರ ದೂರು ನೀಡಿದ್ದರು. ಆ ದೂರಿನ ಮೇಲೆ ಪೊಲೀಸರು ನಿನ್ನೆ ರಾತ್ರಿ ಯಶ್‍ನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಿ ನಂತರ ಬಂಧಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin