ಅರ್ಜುನ ಪ್ರಶಸ್ತಿ ಕೈತಪ್ಪಿದ್ದಕ್ಕೆ ರೋಹನ್ ಬೋಪಣ್ಣ ಕೆಂಡಾಮಂಡಲ

Rohan-Bupanna--01

ನವದೆಹಲಿ,ಆ.5- ಕ್ರೀಡಾ ಕ್ಷೇತ್ರದಲ್ಲಿ ಅತ್ಯುತ್ತುಮ ಸಾಧನೆ ಮಾಡಿರುವ ಆಟಗಾರರಿಗೆ ನೀಡುವ ಪ್ರತಿಷ್ಠಿತ ಅರ್ಜುನ ಪ್ರಶಸ್ತಿ ಮತ್ತೆ ಕೈ ತಪ್ಪಿರುವುದಕ್ಕೆ ಖ್ಯಾತ ಟೆನ್ನಿಸ್ ಆಟಗಾರ ರೋಹನ್ ಬೋಪಣ್ಣ ಅಖಿಲ ಭಾರತ ಟೆನ್ನಿಸ್ ಸಂಘ(ಎಐಟಿಎ)ದ ವಿರುದ್ಧ ಕಿಡಿಕಾರಿದ್ದಾರೆ.  ತಮ್ಮ ಹೆಸರನ್ನು ಈ ಬಾರಿ ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡದೆ ಸಂಘವು ನಿರ್ಲಕ್ಷ್ಯವಹಿಸಿದೆ. ಇದು ಉದ್ದೇಶಪೂರ್ವಕ ಕೃತ್ಯ ಎಂದು ಬೋಪಣ್ಣ ಆರೋಪಿಸಿದ್ದಾರೆ. ಆದರೆ ಈ ಆರೋಪವನ್ನು ನಿರಾಕರಿಸಿರುವ ಎಐಟಿಎ ಪ್ರಶಸ್ತಿಗೆ ಅಗತ್ಯವಾಗಿರುವ ಮಾನದಂಡವನ್ನು ಬೋಪಣ್ಣ ಹೊಂದಿಲ್ಲದ ಕಾರಣ ಅವರ ಹೆಸರನ್ನು ನಿಯಮದಂತೆ ಶಿಫಾರಸ್ಸು ಮಾಡಲಾಗಿಲ್ಲ ಎಂದು ಸಮರ್ಥಿಸಿಕೊಂಡಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin