ಅವೈಜ್ಞಾನಿಕ ಟೆಂಡರ್‍ಶೂರ್ ಕಾಮಗಾರಿಗಳಿಂದ ಸಾರ್ವಜನಿಕರ ತೆರಿಗೆ ಹಣವನ್ನು ಪೋಲು

ಈ ಸುದ್ದಿಯನ್ನು ಶೇರ್ ಮಾಡಿ

Tender-Sure--01

ಬೆಂಗಳೂರು, ಆ.5- ಆರ್ಥಿಕ ದುಸ್ಥಿತಿ ಎದುರಿಸುತ್ತಿರುವ ಬಿಬಿಎಂಪಿಯ ಕೋಟಿ, ಕೋಟಿ ವೆಚ್ಚ ಮಾಡಿ ಅವೈಜ್ಞಾನಿಕ ಟೆಂಡರ್‍ಶೂರ್ ರಸ್ತೆಗಳನ್ನು ನಿರ್ಮಾಣ ಮಾಡುತ್ತಾ ಸಾರ್ವಜನಿಕರ ತೆರಿಗೆ ಹಣವನ್ನು ಪೋಲು ಮಾಡುತ್ತಿದೆ ಎಂದು ಯಡಿಯೂರಪ್ಪ ವಾರ್ಡ್ ಪಾಲಿಕೆ ಸದಸ್ಯೆ ಪೂರ್ಣಿಮಾರಮೇಶ್ ವಾಗ್ದಾಳಿ ನಡೆಸಿದ್ದಾರೆ. ಪ್ರತಿ ಒಂದು ಕಿ.ಮೀ. ಉದ್ದದ ಟೆಂಡರ್‍ಶೂರ್ ರಸ್ತೆಗಲ ನಿರ್ಮಾಣಕ್ಕೆ ಬಿಬಿಎಂಪಿಯು ಸರಾಸರಿ 13 ಕೋಟಿ ರೂ.ಗೂ ಅಧಿಕ ವೆಚ್ಚ ಮಾಡುತ್ತಿದೆ. ನಗರದ ನಾಗರಿಕರಿಂದ ಸಂಗ್ರಹವಾಗುವ ಪ್ರತಿ ಪೈಸೆಯನ್ನೂ ಜಾಗರೂಕತೆಯಿಂದ ವಿನಿಯೋಗಿಸಿ ಕರ್ತವ್ಯ ಪ್ರಜ್ಞೆ ಪ್ರದರ್ಶಿಸಬೇಕಿದ್ದ ಪಾಲಿಕೆ ಹಾಗೂ ರಾಜ್ಯ ಸರ್ಕಾರ ಅನಗತ್ಯ ದುಂದು ವೆಚ್ಚ ಮಾಡುತ್ತಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಂತಹ ದುಬಾರಿ ಟೆಂಡರ್‍ಶೂರ್ ರಸ್ತೆಗಳಿಗೆ ಪರ್ಯಾಯವಾಗಿ ಪಾಲಿಕೆ ವತಿಯಿಂದಲೇ ಅತಿ ಕಡಿಮೆ ವೆಚ್ಚದಲ್ಲಿ ಅಂತರಾಷ್ಟ್ರೀಯ ಗುಣಮಟ್ಟದ ತಂತ್ರಜ್ಞಾನದೊಂದಿಗೆ ಮಾದರಿ ಪಾದವಾರಿ ಮಾರ್ಗವನ್ನು ಮತ್ತೆ ನಮ್ಮ ಯಡಿಯೂರು ವಾರ್ಡ್‍ನಲ್ಲಿ ನಿರ್ಮಿಸಿ ಸರ್ಕಾರ ಹಾಗೂ ಪಾಲಿಕೆಯಲ್ಲಿ ಆಡಳಿತ ನಡೆಸುತ್ತಿರುವವರಿಗೆ ಟೆಂಡರ್‍ಶೂರ್ ರಸ್ತೆ ಕಾಮಗಾರಿಯಲ್ಲಿ 12 ಕೋಟಿ ರೂ. ಹಣ ಪೋಲಾಗುತ್ತಿರುವುದನ್ನು ತೋರಿಸಿಕೊಟ್ಟಿದ್ದೇವೆ ಎಂದು ಹೇಳಿದ್ದಾರೆ.
ಟೆಂಡರ್‍ಶೂರ್ ರಸ್ತೆಗಳಲ್ಲಿ ಇಲ್ಲದ ಹಲವಾರು ವೈಶಿಷ್ಟ್ಯತೆಗಳನ್ನು ಒಳಗೊಂಡಿರುವ ಮಾದರಿ ಪಾದಚಾರಿ ಮಾರ್ಗವನ್ನು ನಮ್ಮ ವಾರ್ಡ್ ವ್ಯಾಪ್ತಿಯ ಜಯನಗರ 6ನೆ ಬಡಾವಣೆಯ ಅಭಯ ಗಣಪತಿ ದೇವಸ್ಥಾನದ ಮುಂಭಾಗದಿಂದ ಯಡಿಯೂರು ವಾಣಿಜ್ಯ ಸಂಕೀರ್ಣದ ಮುಂಭಾಗದವರೆಗಿನ 27ನೆ ಅಡ್ಡರಸ್ತೆಯಲ್ಲಿ ವೈಜ್ಞಾನಿಕವಾಗಿ ನಿರ್ಮಿಸಿದ್ದೇವೆ ಎಂದು ಹೇಳಿದ್ದಾರೆ.

ವೈಶಿಷ್ಟ್ಯತೆ:

ಈ ಮಾದರಿ ಪಾದಚಾರಿ ಮಾರ್ಗದಲ್ಲಿ ಒಳ ಚರಂಡಿ ಕೊಳವೆಗಳು, ಒಎಫ್‍ಸಿ ಡಕ್ಟ್‍ಗಳನ್ನು ಅಳವಡಿಸಲಾಗಿದೆ. ಜಾರದಂತಹ ರಂಗುರಂಗಿನ ಟೈಲ್ಸ್‍ಗಳನ್ನು ಹಾಕಿ ಚರಂಡಿಗಳನ್ನು ನಿರ್ಮಿಸಲಾಗಿದೆ. ಅಲಂಕಾರಿಕ ಸಸಿಗಳು, ಗಿಡಮೂಲಿಕೆಗಳುಳ್ಳ ನಯನಮನೋಹರ ಲಂಭ ಉದ್ಯಾನವನ ಒಳಗೊಂಡಿದೆ. 20 ಮಳೆ ನೀರು ಇಂಗು ಗುಂಡಿಗಳನ್ನು ನಿರ್ಮಿಸಲಾಗಿದೆ. 8 ಗ್ರಾನೆಟ್ ಕಲ್ಲುಗಳನ್ನು ಅಳವಡಿಸಿದ್ದು, 20 ಅಡಿಗೊಂದರಂತೆ ಅಲಂಕಾರಿಕ ದೀಪಗಳನ್ನು ಹಾಕಲಾಗಿದ್ದು, ರಕ್ಷಣಾ ಬೇಲಿಗಳನ್ನು ನಿರ್ಮಿಸಲಾಗಿದ್ದು, ಅಂತಾರಾಷ್ಟ್ರೀಯ ಗುಣಮಟ್ಟದ ತಂತ್ರಜ್ಞಾನದೊಂದಿಗೆ ಇದು ನಿಜಕ್ಕೂ ಮಾದರಿಯಾಗಿದೆ. ಟೆಂಡರ್‍ಶೂರ್ ರಸ್ತೆ ನಿರ್ಮಾಣ ಯೋಜನೆಯಲ್ಲಿ ನೂರಾರು ಕೋಟಿ ರೂ. ಹಣ ದುರ್ಬಳಕೆ ಆಗುತ್ತಿರುವುದನ್ನು ಈ ಮಾದರಿ ಪಾದಚಾರಿ ಮಾರ್ಗ ನಿರ್ಮಾಣ ಮೂಲಕ ರುಜುವಾತು ಪಡಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin