ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (05-08-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಬೆಳಗ್ಗೆ ಅಡಿಗೆ ಮಾಡದ ಆಹಾರವು ಹಳಸಿ ಹೋಗುತ್ತದೆ. ಹೀಗಿರುವಾಗ ಅದೇ ಅನ್ನ-ರಸದಿಂದ ಬೆಳೆದ ದೇಹವು ಹೇಗೆ ನಿತ್ಯವಾದೀತು.-ಗರುಡ ಪುರಾಣ

Rashi

ಪಂಚಾಂಗ : ಶನಿವಾರ, 05.08.2017

ಸೂರ್ಯ ಉದಯ ಬೆ.06.06 / ಸೂರ್ಯ ಅಸ್ತ ಸಂ.06.45
ಚಂದ್ರ ಉದಯ ಮ.04.55 / ಚಂದ್ರ ಅಸ್ತ ರಾ.03.52
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು
ಶ್ರಾವಣ ಮಾಸ / ಶುಕ್ಲ ಪಕ್ಷ / ತಿಥಿ : ತ್ರಯೋದಶಿ (ರಾ.08.52)
ನಕ್ಷತ್ರ: ಪೂರ್ವಾಷಾಢ (ರಾ.11.35) / ಯೋಗ: ವಿಷ್ಕಂಭ (ಸಾ.06.34)
ಕರಣ: ಕೌಲವ-ತೈತಿಲ (ಬೆ.05.46-ರಾ.05.49) / ಮಳೆ ನಕ್ಷತ್ರ: ಪುಷ್ಯ
ಮಾಸ: ಕಟಕ / ತೇದಿ: 21

ರಾಶಿ ಭವಿಷ್ಯ :

ಮೇಷ : ಸಾಧನೆಗಳ ಬಗ್ಗೆ ನೆಂಟರಿಂದ ಪ್ರಶಂಸೆ ವಾಣಿ ಕೇಳಿಬರಲಿದೆ, ಕ್ಷೇತ್ರ ದರ್ಶನದಿಂದ ಸಂತಸ
ವೃಷಭ : ಕೌಟುಂಬಿಕ ಸಮಸ್ಯೆಯಿಂದ ಸ್ವಲ್ಪ ಮಟ್ಟಿಗೆ ಮಾನಸಿಕ ಉದ್ವೇಗಕ್ಕೆ ಒಳಗಾಗುವಿರಿ
ಮಿಥುನ: ಗೊತ್ತು ಗುರಿಯಿಲ್ಲದ ಸುತ್ತಾಟದಿಂದ ಆಯ್ಕೆ ಮಾಡಿಕೊಂಡ ಕಾರ್ಯಗಳು ಅರ್ಧಂಬರ್ಧ ಉಳಿಯಲಿವೆ
ಕಟಕ : ನಿರೀಕ್ಷಿತ ಮೂಲ ಗಳಿಂದ ದ್ರವ್ಯಾನುಕೂಲವಾಗಿ ನೆಮ್ಮದಿ ಎನಿಸಲಿದೆ
ಸಿಂಹ: ಮಿತ್ರರ ಸಲಹೆ ಯಿಂದ ಕುಟುಂಬದಲ್ಲಿನ ಮನಸ್ತಾಪ ತಿಳಿಗೊಳ್ಳಲಿದೆ
ಕನ್ಯಾ: ಅಧಿಕ ಪ್ರವಾಸದಿಂದ ಪ್ರಯಾಸ ಪಡುವ ಸಂಭವವಿದೆ

ತುಲಾ: ಹಿಂದಿನ ಸಾಲದಿಂದ ವೇದನೆಯುಂಟಾಗಲಿದೆ
ವೃಶ್ಚಿಕ : ಮಹತ್ವದ ಕೆಲಸಗಳಿಗೆ ಸರಳ ಮಾತುಕತೆಯಿಂದ ವಿಚಾರ ಸಾಕಾರಗೊಳ್ಳಲಿದೆ
ಧನುಸ್ಸು: ಮಂಗಳ ಕಾರ್ಯಗಳು ನಿಧಾನವಾಗಿ ನಡೆಯಲಿವೆ
ಮಕರ: ವಿದ್ಯಾರ್ಥಿಗಳಿಗೆ ಶುಭಕರ ಬೆಳವಣಿಗೆ
ಕುಂಭ: ಮಾತಾ-ಪಿತರ ಸಹಕಾರದಿಂದ ಗೃಹದಲ್ಲಿ ನೆಮ್ಮದಿ
ಮೀನ: ಹಿಂದಿನ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin