ಉತ್ತರಾಖಂಡ್‍ನಲ್ಲಿ ವರುಣನ ಆರ್ಭಟಕ್ಕೆ 6 ಮಂದಿ ಸಾವು

Rain-Uttarkhand----01

ಡೆಹ್ರಾಡೂನ್, ಆ.5-ಉತ್ತರಾಖಂಡ್‍ನಲ್ಲಿ ಮಳೆಯ ಆರ್ಭಟಕ್ಕೆ ಆರು ಮಂದಿ ಮೃತಪಟ್ಟು, ಅನೇಕರು ಗಾಯಗೊಂಡಿದ್ದಾರೆ. ವರುಣನ ರೌದ್ರಾವತಾರಕ್ಕೆ ಸಾವಿರಾರು ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ.   ಉತ್ತರಾಖಂಡ್‍ನ ಪೌರಿ ಮತ್ತು ಡೆಹ್ರಾಡೂನ್ ಜಿಲ್ಲೆಗಳಲ್ಲಿ ಭಾರೀ ಮಳೆಯಿಂದ ಮನೆಗಳು ಕುಸಿದು 6 ಮಂದಿ ಸಾವಿಗೀಡಾಗಿ, 7 ಜನ ಗಾಯಗೊಂಡಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಜಗತ್ ರಾಮ್ ಜೋಷಿ ಹೇಳಿದ್ದಾರೆ.   ಪೌರಿ ಜಿಲ್ಲೆಯ ಕೋಟ್‍ದ್ವಾರ್‍ನಲ್ಲಿ ನಿರಾಶ್ರಿತರ ಕಾಲೋನಿಯಲ್ಲಿ ಪ್ರವಾಹದ ನೀರು ಮನೆಗಳಿಗೆ ನುಗ್ಗಿ ಕಟ್ಟಡ ಕುಸಿದುಬಿದ್ದು ಮೂವರು ಮೃತಪಟ್ಟರು. ಇದೇ ಕಾಲೋನಿಯಲ್ಲಿ ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದ ಸಿಲಿಂಡರ್ ಸ್ಫೋಟಗೊಂಡು ಇಬ್ಬರಿಗೆ ತೀವ್ರ ಗಾಯಗಳಾಗಿವೆ.

ಕೋಟ್‍ದ್ವಾರ್ ತಹಸೀಲ್‍ನ ಮನ್‍ಪುರ್‍ನಲ್ಲಿ ಗೋಡೆಯೊಂದು ಕುಸಿದು, ಇಬ್ಬರು ಸಾವಿಗೀಡಾದರು. ಲಾನ್ಸ್‍ಡೌನ್‍ನ ನಯಾಗಾಂವ್ ಪ್ರದೇಶದಲ್ಲಿ ಮನೆ ಕುಸಿತು 16 ವರ್ಷದ ಬಾಲಕಿ ಅಸುನೀಗಿದಳು. ಮಳೆಗೆ ಸಂಬಂಧಪಟ್ಟ ದುರಂತಗಳಲ್ಲಿ ಕೆಲವರಿಗೆ ಗಾಯಗಳಾಗಿದ್ದು, ಪ್ರವಾಹದಿಂದಾಗಿ ಅನೇಕ ಮನೆಗಳಿಗೆ ಹಾನಿಯಾಗಿವೆ. 17 ಸದಸ್ಯರ ರಾಜ್ಯ ವಿಪತ್ತು ಸ್ಪಂದನೆ ಪಡೆ (ಎಸ್‍ಡಿಆರ್‍ಎಫ್) ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ಮುಂದುವರಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin