ಕಾಶ್ಮೀರದಲ್ಲಿ ಗೋಲಿಬಾರ್, ಹಲವು ಪ್ರತಿಭಟನಾಕಾರರಿಗೆ ಗಾಯ

Kashmir-Voilece

ಶ್ರೀನಗರ, ಆ.5- ಕಲ್ಲು ತೂರಾಟದಲ್ಲಿ ತೊಡಗಿದ್ದ ಉದ್ರಿಕ್ತ ಗುಂಪನ್ನು ಚದುರಿಸಲು ಯೋಧರು ನಡೆಸಿದ ಗೋಲಿಬಾರ್‍ನಲ್ಲಿ ಹಲವರು ಗಾಯಗೊಂಡಿರುವ ಘಟನೆ ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ನಡೆದಿದೆ.  ಬಂಡಿಪೋರಾದ ಸುಮ್‍ಬೋಲ್ ಪ್ರದೇಶದ ಎಸ್.ಕೆ.ಬಾಲಾ ಬಡಾವಣೆ ಮೂಲಕ ಹಾದು ಹೋಗುತ್ತಿದ್ದ ಸೇನಾ ವಾಹನದ ಮೇಲೆ ಯುವಕರ ಗುಂಪೊಂದು ಕಲ್ಲು ತೂರಾಟ ನಡೆಸಿತು. ಹಿಂಸಾಚಾರಕ್ಕೆ ಮುಂದಾದ ಗುಂಪನ್ನು ಚದುರಿಸಲು ಸೇನಾ ಸಿಬ್ಬಂದಿ ಗುಂಡು ಹಾರಿಸಿದಾಗ ಕೆಲವರು ಗಾಯಗೊಂಡರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗಾಯಾಳುಗಳನ್ನು ಶ್ರೀನಗರದ ಆಸ್ಪತ್ರೆಗೆ ಸೇರಿಸಲಾಗಿದೆ. ಅವರು ಚೇತರಿಸಿಕೊಂಡ ಬಳಿಕ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುವುದಾಗಿ ಅವರು ಹೇಳಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin