ಚೀನಾದ ಜುಲ್ಫಿಕರ್‌’ನನ್ನು ಮಣಿಸಿ 2ನೇ ಡಬ್ಲ್ಯೂಬಿಒ ಟ್ರೋಫಿ ಗೆದ್ದ ವಿಜೇಂದರ್‌ ಸಿಂಗ್‌

ಈ ಸುದ್ದಿಯನ್ನು ಶೇರ್ ಮಾಡಿ

Vijendra-Singh--01

ಮುಂಬೈ, ಆ.05 : ಪ್ರೊಬಾಕ್ಸಿಂಗ್‌ನಲ್ಲಿ ಡಬ್ಲ್ಯೂಬಿಒ ಏಷ್ಯಾ ಫೆಸಿಪಿಕ್‌ ಸೂಪರ್‌ ಮಿಡಲ್‌ ವೇಟ್‌ ಹಣಾಹಣಿಯಲ್ಲಿ ವಿಜೇಂದರ್‌ ಸಿಂಗ್‌ ಚೀನಾ ಎದುರಾಳಿ ಜುಲ್ಫಿಕರ್‌ ಮಾಯ್‌ಮಾಯ್‌ ಥಿಯಾಲಿ ಅವರನ್ನು ಸೋಲಿಸುವ ಮೂಲಕ ವೃತ್ತಿ ಜೀವನದ ಎರಡನೇ ಗೆಲುವು ದಾಖಲಿಸಿದ್ದಾರೆ. ಮುಂಬೈನಲ್ಲಿ ನಡೆದ ಈ ಪಂದ್ಯದಲ್ಲಿ ಭಾರೀ ಅಭಿಮಾನಿಗಳ ಸಮ್ಮುಖದಲ್ಲಿ ವಿಜೇಂದರ್‌ 2ನೇ ಡಬ್ಲ್ಯೂಬಿಒ ಟ್ರೋಫಿ ಮುಡಿಗೇರಿಸಿಕೊಂಡಿದ್ದಾರೆ.

ಜುಲ್ಫಿಕರ್‌ ಮಾಯ್‌ಮಾಯ್‌ಥಿಯಾಲಿ ಚೀನಾದ ನಂಬರ್‌ ಒನ್‌ ಬಾಕ್ಸರ್‌ ಆಗಿದ್ದರು. ವಿಶ್ವ ಮಟ್ಟದಲ್ಲಿ 127ನೇ ರಾಂಕಿಂಗ್ ಹೊಂದಿದ್ದರು. ಜುಲ್ಫಿಕರ್‌- ವಿಜೇಂದರ್‌ ಸಿಂಗ್‌ಗಿಂತ ನಡುವಿನ ಕದನವನ್ನು ಚೀನಾ-ಭಾರತ ನಡುವಿನ ಕದನ ಎಂದೇ ಬಣ್ಣಿಸಲಾಗಿತ್ತು.   ಈವರೆಗಿನ ಎಂಟು ನಾಕೌಟ್‌ ಸ್ಪರ್ಧೆಗಳಲ್ಲಿ ಏಳನ್ನು ನಿರಾಯಾಸವಾಗಿ ಗೆದ್ದಿದ್ದಾರೆ.

ವಿಜೇಂದರ್ ಅವರಿಗಿಂತ ಒಂಬತ್ತು ವರ್ಷ ಸಣ್ಣವರಾಗಿರುವ ಜುಲ್ಫಿಕರ್‌ ಈ ಸ್ಪರ್ಧೆಗಾಗಿ ಪ್ರತಿನಿತ್ಯ 10 ತಾಸು ಅಭ್ಯಾಸ ನಡೆಸುತ್ತಿರುವುದಾಗಿ ಇತ್ತೀಚೆಗೆ ತಿಳಿಸಿದ್ದರು. ವಯಸ್ಸಿನ ಅಂತರದ ಕುರಿತ ಪ್ರಶ್ನೆಗೆ ಉತ್ತರಿಸಿದ ವಿಜೇಂದರ್‌ ‘ಇಲ್ಲಿ ಅನುಭವವೇ ಮುಖ್ಯ ವಯಸ್ಸು ಗಣನೆಗೆ ಬರುವುದಿಲ್ಲ. ನನಗೆ 30 ವರ್ಷ ಆಗಿದ್ದರೂ ಬಾಕ್ಗಿಂಗ್‌ಗೆ ಇಳಿದಾಗ ಇನ್ನೂ 20 ವರ್ಷದ ಯುವಕನಂತೆ ಅನಿಸುತ್ತದೆ’ ಎಂದಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin