ಕಾಂಗ್ರೆಸ್’ಗೆ ಮುಜುಗರವನ್ನುಂಟುಮಾಡಿದ ರಮ್ಯಾ ಟ್ವೀಟ್

ಈ ಸುದ್ದಿಯನ್ನು ಶೇರ್ ಮಾಡಿ

Ramya-02
ನವದೆಹಲಿ, ಆ.5- ಕಾಂಗ್ರೆಸ್‍ನ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆಯಾಗಿರುವ ಮಾಜಿ ಸಂಸದೆ ನಟಿ ರಮ್ಯಾ ಅವರು ತಮ್ಮ ಟ್ವೀಟ್‍ವೊಂದರಲ್ಲಿ ಬಿಜೆಪಿ ನಾಯಕರ ಬಗ್ಗೆ ಕೆಟ್ಟ ಅರ್ಥ ಬರುವ ಪದವೊಂದನ್ನು ಬಳಸಿದ್ದು , ಅದು ಪ್ರಧಾನಿ ನರೇಂದ್ರ ಮೋದಿ ಅಥವಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರನ್ನೇ ಕುರಿತದ್ದು ಎಂದು ಹೇಳಲಾಗಿದೆ.  ರಮ್ಯಾ ಅವರ ಈ ಟ್ವೀಟ್‍ಗೆ ಕಾರಣ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರವಾಹ ಸಂತ್ರಸ್ತರ ಭೇಟಿಗಾಗಿ ಗುಜರಾತ್‍ಗೆ ತೆರಳಿದ ಸಂದರ್ಭ ಅವರ ಕಾರಿನ ಮೇಲೆ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದು.

ಈ ಹಿನ್ನೆಲೆಯಲ್ಲಿ ರಮ್ಯಾ ಇಂಥದೊಂದು ಟ್ವೀಟ್ ಮಾಡಿದ್ದಾರೆ. ಇದು ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ರಮ್ಯಾ ಅವರ ಈ ಟ್ವೀಟ್ ಹಿನ್ನೆಲೆಯಲ್ಲಿ ಉತ್ತರ ನೀಡಿರುವ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ, ಇದು ಕಾಂಗ್ರೆಸ್‍ನ ನಾಟಕ(ಕಲ್ಲು ತೂರಾಟ ಘಟನೆ) ಎಂಬುದು ಗುಜರಾತ್ ಜನರಿಗೆ ಗೊತ್ತಿರದ ವಿಚಾರವಲ್ಲ ಎಂದು ಕೆಣಕಿದ್ದಾರೆ.

ರಮ್ಯಾ ಅವರು ಸೂಚಿಸಿರುವ ಈ ಮಾತು ಬಿಜೆಪಿಯ ಯಾವ ನಾಯಕರಿಗೆ ಅನ್ವಯಿಸುತ್ತದೆ ಎಂಬುದನ್ನು ಸ್ವತಃ ರಮ್ಯಾ ಅವರೇ ಹೇಳಬೇಕು. ಒಟ್ಟಾರೆ ರಮ್ಯಾ ಅವರ ಈ ಬಾಲಿಶವಾದ ಟ್ವೀಟ್‍ನಿಂದ ಕಾಂಗ್ರೆಸ್‍ಗೆ ಮುಖಭಂಗವಾಗಿರುವುದಂತೂ ನಿಜ. ಅಷ್ಟೇ ಅಲ್ಲ ರಮ್ಯಾ ನೀಡಿರುವ ಈ ಟ್ವೀಟ್‍ಗೆ ಕಾಂಗ್ರೆಸ್ ಪಕ್ಷ ಉತ್ತರ ಕೊಡಬೇಕಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOSb

Facebook Comments

Sri Raghav

Admin