ದೆಹಲಿ ಮೆಟ್ರೊ ಆಸ್ಪತ್ರೆ ವೈದ್ಯರೊಬ್ಬರ ಅಪಹರಣ ಪ್ರಕರಣ, ಇಬ್ಬರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Kidnap-001

ನವದೆಹಲಿ,ಆ.5 – ನಗರದ ಮೆಟ್ರೊ ಆಸ್ಪತ್ರೆಯ ವೈದ್ಯರೊಬ್ಬರನ್ನು ಅಪಹರಣ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಸೋದರರನ್ನು ಬಂಧಿಸುವಲ್ಲಿ ದೆಹಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕಳೆದ ಜು.6ರಂದು ವೈದ್ಯ ಶ್ರೀಕಾಂತ್ ಕೌರ್ ಅವರು ಪ್ರೀತ್ ವಿಹಾರ್‍ನಿಂದ ಗೌತಮ್‍ನಗರಕ್ಕೆ ಓಲಾ ಕ್ಯಾಬ್‍ನಲ್ಲಿ ತೆರಳುತ್ತಿದ್ದಾಗ ಚಾಲಕ ಸೇರಿದಂತೆ ನಾಲ್ವರು ದುಷ್ಕರ್ಮಿಗಳು ಅವರನ್ನು ಅಪಹರಿಸಿ 5 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ವೈದ್ಯರ ಕುಟುಂಬಸ್ಥರು ದೆಹಲಿಗೆ ಪೊಲೀಸರಿಗೆ ದೂರು ನೀಡಿದ್ದರು.

ದೂರಿನನ್ವಯ ತನಿಖೆ ಕೈಗೊಂಡ ಪೊಲೀಸರು ಜು.19ರಂದು ಈ ನಾಲ್ವರು ದುಷ್ಕರ್ಮಿಗಳನ್ನ ಬಂಧಿಸಿ ಶ್ರೀಕಾಂತ್ ಕೌರ್ ಅವರನ್ನು ರಕ್ಷಿಸಿದ್ದರು. ಬಂಧಿತರನ್ನು ವಿಚಾರಣೆಗೊಳಪಡಿಸಿದಾಗ ಇದರ ರೂವಾರಿಗಳು ಸುಶೀಲ್ ಹಾಗೂ ಆತನ ಸೋದರ ಅನೂಜ್ ಎಂದು ತಿಳಿಸಿದ್ದಾರೆ.   ತಲೆಮರೆಸಿಕೊಂಡಿದ್ದ ಅಪಹರಣದ ರೂವಾರಿಗಳಾದ ಸುಶೀಲ್ ಹಾಗೂ ಅನೂಜ್ ಅವರು ಉತ್ತರಪ್ರದೇಶದ ಮೀರತ್‍ನ ದೌರಾಲ ಗ್ರಾಮದಲ್ಲಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ದೆಹಲಿ ಹಾಗೂ ಉತ್ತರ ಪ್ರದೇಶದ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಸೋದರರಿಬ್ಬರನ್ನು ನಿನ್ನೆ ಬಂಧಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin