ಪತ್ತೆದಾರರಿಗೆ ಸೇನಾ ರಹಸ್ಯ ಸೋರಿಕೆ ಪ್ರಕರಣದ ತನಿಖೆ ಆರಂಭ

Army--01

ಲಕ್ನೋ, ಆ.5-ಭಾರತೀಯ ಸೇನೆಗೆ ಸಂಬಂಧಪಟ್ಟ ರಹಸ್ಯ ಮಾಹಿತಿ ಪತ್ತೆದಾರರಿಗೆ ಸೋರಿಕೆಯಾಗಿರುವ ಪ್ರಕರಣ ಕುರಿತು ಉತ್ತರ ಪ್ರದೇಶ ಭಯೋತ್ಪಾದನೆ ನಿಗ್ರಹ ದಳ (ಎಟಿಎಸ್) ತನಿಖೆ ಆರಂಭಿಸಿದೆ. ಝಾನ್ಸಿಯ ಎಸ್‍ಡಿಎಂ ಸರ್ದಾರ್ ಕಚೇರಿಯಿಂದ ಪತ್ತೆದಾರರಿಗೆ ಸೇನೆಯ ರಹಸ್ಯ ದಾಖಲೆಗಳನ್ನು ಪತ್ತೆದಾರರಿಗೆ ನೀಡಲಾಗಿದೆ ಎಂಬ ಮಾಹಿತಿ ಮೇರೆಗೆ ತನಿಖೆ ತೀವ್ರಗೊಳಿಸಲಾಗಿದೆ ಎಂದು ಎಟಿಎಸ್ ಮಹಾ ನಿರೀಕ್ಷಕ ಆಸೀಮ್ ಅರುಣ್ ಹೇಳಿದ್ದಾರೆ.

ರಹಸ್ಯ ಮಾಹಿತಿ ಮತ್ತು ದಾಖಲೆ ಸೋರಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಚೇರಿಯ ಕೆಲವು ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಕಂಪ್ಯೂಟರ್‍ಗಳು, ಪೆನ್‍ಡ್ರೈವ್‍ಗಳೊಂದಿಗೆ ಕೆಲವು ದಾಖಲೆಪತ್ರಗಳನ್ನು ಸಹ ವಶಕ್ಕೆ ತೆಗೆದುಕೊಂಡು ತನಿಖೆ ಮುಂದುವರಿಸಲಾಗಿದೆ. ಸಾಕ್ಷ್ಯಾಧಾರದ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin