ಬಿಜೆಪಿಯವರ ಡರ್ಟಿ ಪಾಲಿಟೆಕ್ಸ್’ನ ಬಣ್ಣ ಬಯಲು ಮಾಡುತ್ತೇವೆ : ಶಕ್ತಿ ಸಿನ್ಹಾ ಗೋಯಲ್

ಈ ಸುದ್ದಿಯನ್ನು ಶೇರ್ ಮಾಡಿ

Gujarat-MLA

ಬೆಂಗಳೂರು, ಆ.5-ಬಿಜೆಪಿಯವರ ಲಂಚ ಆಮಿಷವನ್ನು ನಾವು ಬಹಿರಂಗಪಡಿಸುತ್ತೇವೆ. ಬಿಜೆಪಿಯವರು ಅಧಿಕಾರದ ಆಸೆಗಾಗಿ ಡರ್ಟಿ ಪಾಲಿಟೆಕ್ಸ್ ಮಾಡುತ್ತಿದ್ದಾರೆ. ಇದರ ವಿರುದ್ದ ನಾವು ಹೋರಾಟ ಮಾಡುತ್ತೇವೆ ಎಂದು ಗುಜರಾತ್ ಕಾಂಗ್ರೆಸ್ ಮುಖಂಡ ಶಕ್ತಿ ಸಿನ್ಹಾ ಗೋಯಲ್ ಗುಡುಗಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಗುಜರಾತ್ ಬಿಜೆಪಿ 15 ಕೋಟಿ ರೂ. ಆಮಿಷ ನೀಡಿತ್ತು. ಇದನ್ನು ತಪ್ಪಿಸಲು ನಾವು ರಾಜ್ಯಕ್ಕೆ ಬಂದಿದ್ದೇವೆ. ಬಿಜೆಪಿಯವರ ಲಂಚದ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಹೇಳಿದರು.

ಆಗಸ್ಟ್ 8ರಂದು ಗುಜರಾತ್ ರಾಜ್ಯಸಭೆ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಆಪರೇಷನ್ ಕಮಲ ಭೀತಿಯಿಂದ ರಕ್ಷಿಸಿಕೊಳ್ಳಲು ರಾಜ್ಯಕ್ಕೆ ಆಗಮಿಸಿದ್ದೇವೆ. ಪ್ರಜಾಪ್ರಭುತ್ವ ಉಳಿಸಲು ನಾವು ಬೆಂಗಳೂರಿಗೆ ಬಂದಿದ್ದೇವೆ ಎಂದರು.  ನಮ್ಮನ್ನು ಬಲವಂತಾಗಿ ಯಾರೂ ಕೂಡಿ ಹಾಕಿಲ್ಲ. 44 ಶಾಸಕರು ಒಟ್ಟಾಗಿದ್ದೇವೆ. ಹೈಕಮಾಂಡ್ ನಮ್ಮ ಜೊತೆಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ಮನೆ, ಕಚೇರಿ ಮೇಲೆ ಯಾಕೆ ಐಟಿ ದಾಳಿ ನಡೆದಿಲ್ಲ. ರಾಜಕೀಯ ದುರದ್ದೇಶದಿಂದ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮನೆ ಮೇಲೆ ಐಟಿ ದಾಳಿಯಾಗಿದೆ. ಯಾವ ಸಂದರ್ಭದಲ್ಲಿ ದಾಳಿ ನಡೆದಿದೆ ಎಂಬುದು ಮುಖ್ಯ ಎಂದು ಅವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಶಾಸಕರು ರೆಸಾರ್ಟ್‍ನಿಂದ ನೇರ ರಾಜಭವನಕ್ಕೆ ತೆರಳಿ ರಾಜ್ಯಪಾಲ ವಜುಭಾಯಿ ವಾಲಾ ಅವರನ್ನು ಸೌಹಾರ್ದಯುತವಾಗಿ ಭೇಟಿ ಮಾಡಿದರು. ರಾಜಪಾಲರನ್ನು ಸೌಹಾರ್ದಯುತವಾಗಿ ಭೇಟಿ ಮಾಡಿದ್ದೇವೆ. ಇದಕ್ಕೆ ಯಾವುದೇ ಅರ್ಥ ಕಲ್ಪಿಸಬೇಡಿ. ಗುಜರಾತ್ ಸ್ಪೀಕರ್ ಆಗಿದ್ದಾಗ ಪಕ್ಷಾತೀತವಾಗಿ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿದ್ದಾರೆ. ಹಾಗಾಗಿ ನಾವು ಭೇಟಿ ಮಾಡಿದ್ದೇವೆ ಎಂದರು. ಬಳಿಕ ರಾಜಭವನದಿಂದ ವಿಧಾನಸೌಧಕ್ಕೆ ಓಲ್ವಾ ಬಸ್‍ನಲ್ಲಿ ತೆರಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin