ಬಿಜೆಪಿಯವರ ಯಾವುದೇ ದಾಳಿಯನ್ನು ನಾವು ಸಮರ್ಥವಾಗಿ ಎದುರಿಸುತ್ತೇವೆ : ಎಚ್.ಸಿ.ಮಹದೇವಪ್ಪ

HC-Mahadevappa

ಬೆಂಗಳೂರು, ಆ.5-ಬಿಜೆಪಿಯವರು ಯಾವುದೇ ರೀತಿಯ ದಾಳಿ ಮಾಡಿಸಿದರೂ ನಾವು ಅದನ್ನು ಸಮರ್ಥವಾಗಿ ಎದುರಿಸುತ್ತೇವೆ ಎಂದು ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ಖಡಕ್ಕಾಗಿ ಹೇಳಿದರು. ಪ್ರೆಸ್‍ಕ್ಲಬ್ ಸುವರ್ಣ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಕ್ಲಬ್ ಸದಸ್ಯರ ಮಕ್ಕಳಿಗೆ ಪ್ರತಿಭಾಪುರಸ್ಕಾರ ಕಾರ್ಯಕ್ರಮಕ್ಕೂ ಮುನ್ನ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.  ಸಚಿವ ಡಿ.ಕೆ.ಶಿವಕುಮಾರ್ ಮನೆ ಮೇಲೆ ನಡೆದ ಐಟಿ ದಾಳಿ ದುರುದ್ದೇಶಪೂರ್ವಕ ಹಾಗೂ ಪ್ರಜಾಸತ್ತಾತ್ಮಕತೆಗೆ ಮಾರಕ ಎಂದು ಅವರು ಅಭಿಪ್ರಾಯಪಟ್ಟರು.

ಐಟಿ ದಾಳಿ ಒಂದು ಮಾಮೂಲು ಪ್ರಕ್ರಿಯೆ. ಆದರೆ ಭಾರತೀಯ ಜನತಾಪಕ್ಷದವರು ಬಿಜೆಪಿಯೇತರ ರಾಜ್ಯಗಳ ಮುಖಂಡರ ಮೇಲೆ ದಾಳಿ ಮಾಡಲು ಈ ಐಟಿ ಇಲಾಖೆಯನ್ನು ಪ್ರತ್ಯಸ್ತ್ರವನ್ನಾಗಿ ಬಳಕೆ ಮಾಡಿಕೊಂಡಿರುವುದು ನಿಜಕ್ಕೂ ದುರ್ದೈವ ಎಂದರು. ಇನ್ನೂ ಕೆಲವು ಸಚಿವರು ಐಟಿ ದಾಳಿಗೆ ಒಳಗಾಗುತ್ತಾರಂತಲ್ಲ ಎಂಬ ವರದಿಗಾರರ ಪ್ರಶ್ನೆಗೆ, ಯಾರೇ ಆಗಲಿ ಕಾನೂನುಬಾಹಿರವಾಗಿ ಆಸ್ತಿ ಮಾಡಿದ್ದರೆ ಐಟಿ ದಾಳಿ ಮಾಡಲಿ. ಆದರೆ ಬಿಜೆಪಿಯವರು ಬೇಕೆಂದೇ ದುರುದ್ದೇಶದಿಂದ ದಾಳಿ ಮಾಡಿಸಿದ್ದಾರೆ. ಅವರಿಗೆ ಈ ದಾಳಿ ಮಾಡಿಸಲು ನೈತಿಕತೆಯೇ ಇಲ್ಲ. ಅವರು ಏನೇ ಮಾಡಿದರೂ ನಮ್ಮ ಕಾಂಗ್ರೆಸ್ ಪಕ್ಷ ಸಮರ್ಥವಾಗಿ ನಿಭಾಯಿಸುತ್ತದೆ. ಈ ಬಗ್ಗೆ ಯಾವುದೇ ಆತಂಕವೂ ಇಲ್ಲ. ಅವರ ಯಾವುದೇ ದಾಳಿಯನ್ನು ನಾವು ಸಮರ್ಥವಾಗಿ ಎದುರಿಸುತ್ತೇವೆ ಎಂದು ಮಹದೇವಪ್ಪ ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin