ಭಾರತದ ಬೌಲಿಂಗ್‍ದಾಳಿಗೆ ತತ್ತರಿಸಿದ ಲಂಕಾ

ಈ ಸುದ್ದಿಯನ್ನು ಶೇರ್ ಮಾಡಿ

Kohli-01

ಕೊಲೊಂಬೊ,ಆ.5- ಸತತ ಎರಡು ದಿನಗಳ ಕಾಲ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿ ಮಿಂಚಿದ ಭಾರತದ ಬೌಲಿಂಗ್ ದಾಳಿಗೆ ತತ್ತರಿಸಿದ ಶ್ರೀಲಂಕಾ ಮೊದಲ ಇನ್ನಿಂಗ್ಸ್‍ನಲ್ಲಿ 183 ರನ್‍ಗೆ ಸರ್ವಪತನವಾಗಿ ಫಾಲೊ ಆನ್‍ಗೆ ಸಿಲುಕಿದೆ.  ಇಲ್ಲಿನ ಸಿಂಹಳೀಯರ ಸ್ಪೋಟ್ರ್ಸ್ ಕ್ಲಬ್ ಕ್ರಿಕೆಟ್ ಮೈದಾನದಲ್ಲಿ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ 2ನೇ ಟೆಸ್ಟ್‍ನಲ್ಲಿ ಪ್ರವಾಸಿ ಭಾರತ ತಂಡ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ. ಮೊದಲ ಎರಡು ದಿನಗಳಲ್ಲಿ ಭಾರತ ಮನಮೋಹಕ ಬ್ಯಾಟಿಂಗ್ ಬಲದಿಂದ ಬೃಹತ್ ಮೊತ್ತ ದಾಖಲಿಸಿತ್ತು. ನಿನ್ನೆ ಬೃಹತ್ ಮೊತ್ತ ಬೆನ್ನಟ್ಟಿದ ಶ್ರೀಲಂಕಾ ಆರಂಭದಲ್ಲೇ ಎರಡು ವಿಕೆಟ್ ಕಳೆದುಕೊಂಡು ಆಘಾತಕ್ಕೊಳಗಾಗಿತ್ತು.

50 ರನ್‍ನಿಂದ ದಿನದಾಟ ಆರಂಭಿಸಿದ ಶ್ರೀಲಂಕಾ ಪ್ರವಾಸಿ ತಂಡದ ಬೌಲರ್‍ಗಳ ದಾಳಿಗೆ ಕಂಗೆಟ್ಟು 183 ರನ್‍ಗೆ ಆಲ್ ಔಟ್ ಆಗಿ 439 ರನ್‍ಗಳ ಭಾರೀ ಹಿನ್ನಡೆ ಅನುಭವಿಸಿದೆ.  ಲಂಕಾ ಪರ ದಿಕೆವಾಲ(51) ಅರ್ಧಶತಕ ಗಳಿಸಿದ್ದರೆ ಕುಶಾಲ್ ಮಂಡೀಸ್(24), ಚಂಢಿಮಾಲ್(10), ಮ್ಯಾಥ್ಯೂಸ್(26) ಡಿ.ಸೆಲ್ವ(0), ದಿಲ್‍ರ್‍ವಾನ್(25), ಯರತ್(2), ಪ್ರದೀಪ್ ಶೂನ್ಯಕ್ಕೆ ಔಟಾದರು.   ಫಾಲೊ ಆನ್‍ಗೆ ಸಿಲುಕಿದ ಲಂಕಾ 2ನೇ ಇನ್ನಿಂಗ್ಸ್ ಆರಂಭಿಸಿ ಪ್ರಾರಂಭದಲ್ಲೇ ತರಂಗ ಅವರ ವಿಕೆಟ್ ಕಳೆದುಕೊಂಡಿದೆ. ಪತ್ರಿಕೆ ಮುದ್ರಣವಾಗುವ ಸಮಯದಲ್ಲಿ ಲಂಕಾ ಒಂದು ವಿಕೆಟ್ ನಷ್ಟಕ್ಕೆ 39 ರನ್ ಕಲೆ ಹಾಕಿ ಸೋಲಿನ ಸುಳಿಗೆ ಸಿಲುಕಿದೆ.

ಅಶ್ವಿನ್‍ಗೆ ಐದು ವಿಕೆಟ್ ಗೊಂಚಲು:

ಇದಕ್ಕೂ ಮುನ್ನ ಟೆಸ್ಟ್‍ನಲ್ಲಿ ಮಿಂಚಿನ ಬೌಲಿಂಗ್ ದಾಳಿ ಮಾಡಿರುವ ಸ್ಪಿನ್ನರ್ ಅಶ್ವಿನ್ ಲಂಕಾ ಬ್ಯಾಟ್ಸಮನ್‍ಗಳ ಬೆನ್ನೆಲುಬು ಮುರಿದರು. ನಿನ್ನೆ ಆರಂಭಿಕರನ್ನು ಪೆವಿಲಿಯನ್‍ಗಟ್ಟಿದ ಅಶ್ವಿನ್ ಇಂದು ಮೂರು ವಿಕೆಟ್ ಕಬಳಿಸುವ ಮೂಲಕ 5 ವಿಕೆಟ್ ಪಡೆದರು.  ವೇಗದ ಬೌಲರ್ ಮೊಹಮ್ಮದ್ ಶಮಿ(2), ಜಡೇಜ(2) ಹಾಗೂ ಉಮೇಶ್ ಯಾದವ್ 1 ವಿಕೆಟ್ ಕಬಳಿಸಿ ಲಂಕಾ ಬ್ಯಾಟ್ಸಮನ್‍ಗಳಿಗೆ ಸ್ವಿಂಹ ಸ್ವಪ್ನವಾದರು.   ಒಟ್ಟಾರೆ ಬ್ಯಾಟಿಂಗ್ ಹಾಗೂ ಬೌಲಿಂಗ್‍ನಲ್ಲಿ ಸಂಘಟಿತ ಪ್ರದರ್ಶನ ನೀಡಿರುವ ಭಾರತ ಸರಣಿ ಗೆಲ್ಲುವ ಸನಿಹದಲ್ಲಿದೆ.

ಸ್ಕೋರ್ : 

India 622/9d
Sri Lanka 183 & 148/1 (36 ov, f/o)
Day 3: 3rd Session – Sri Lanka trail by 290 runs

 

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin