ಮರಣ ನೋಂದಣಿಗೆ ಆಧಾರ್ ಕಡ್ಡಾಯವಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

Aadhar

ನವದೆಹಲಿ, ಆ.5- ಮರಣ ನೋಂದಣಿಗೆ ಆಧಾರ್ ಕಡ್ಡಾಯವಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ವಂಚನೆ ತಡೆಯಲು ಮರಣ ನೋಂದಣಿ ಮಾಡಿಸುವ ವೇಳೆ ಆಧಾರ್ ನಂಬರ್ ನೀಡಬೇಕು ಎಂದು ಸುತ್ತೋಲೆ ಹೊರಡಿಸಲಾಗಿತ್ತು. ಗೃಹ ಇಲಾಖೆ ಈ ಬಗ್ಗೆ ಸ್ಪಷ್ಟನೆಯನ್ನು ನೀಡಿದ್ದು, ಜನರಲ್ಲಿದ್ದ ಗೊಂದಲವನ್ನು ಬಗೆಹರಿಸಿದೆ. ಮರಣ ನೋಂದಣಿ ವೇಳೆ ಆಧಾರ್ ನಂಬರ್ ನೀಡಿದರೆ ಮೃತ ವ್ಯಕ್ತಿಯ ಗುರುತು ಪತ್ತೆ ಹಚ್ಚುವುದು ಸುಲಭವಾಗುತ್ತದೆ. ಸಂಬಂಧಿಕರು ನೀಡಿದ ಮಾಹಿತಿ ನಿಖರವಾದದ್ದೇ? ಎಂದು ತಿಳಿಯಲಿದೆ ಎಂದು ಹೇಳಿದೆ.

ಮರಣ ನೋಂದಣಿ ಪತ್ರ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯವಲ್ಲ. ಮೃತ ವ್ಯಕ್ತಿಯ ಆಧಾರ್ ನಂಬರ್ ಮತ್ತು ಎನ್ ರೋಲ್ ಮೆಂಟ್ ಐಡಿ ಬಗ್ಗೆ ಮಾಹಿತಿ ತಿಳಿಯದಿದ್ದರೆ ಪ್ರಮಾಣ ಪತ್ರವನ್ನು ಸಂಬಂಧಿಕರಿಗೆ ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ. ಮರಣ ನೋಂದಣಿ ಮಾಡಿಸುವ ಸಂದರ್ಭದಲ್ಲಿ ಹಲವಾರು ದಾಖೆಲಗಳನ್ನು ನೀಡುವುದಕ್ಕಿಂತ ಆಧಾರ್ ನಂಬರ್ ನೀಡಿದರೆ ಸಾಕಾಗುತ್ತದೆ. ಸಂಬಂಧಿಕರು ನೀಡುವ ಮಾಹಿತಿಯ ನಿಖರತೆ ತಿಳಿಯಲು ಮತ್ತು ವಂಚನೆ ತಡೆಯಲು ಆಧಾರ್ ನಂಬರ್ ನೀಡಬೇಕು. ಆದರೆ, ಪ್ರಮಾಣ ಪತ್ರ ಪಡೆಯಲು ಇದು ಕಡ್ಡಾಯವಲ್ಲ ಎಂದು ಹೇಳಿದೆ.

ಮರಣ ಹೊಂದಿದ ವ್ಯಕ್ತಿಯ ಗುರುತು ಪತ್ತೆ ಹಚ್ಚಲು ಆಧಾರ್ ನಂಬರ್ ಅಗತ್ಯವಾಗಿದೆ. ಆದ್ದರಿಂದ ಮರಣ ನೋಂದಣಿಗೆ ಆಧಾರ್ ಸಂಖ್ಯೆಯನ್ನು ಅ.1 ರಿಂದ ಗೃಹ ಸಚಿವಾಲಯ ಕಡ್ಡಾಯಗೊಳಿಸಿದೆ ಎಂದು ಈ ಮೊದಲು ವರದಿಯಾಗಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin