ರಾಜ್ಯಸಭೆ ಸಂಖ್ಯಾಬಲ ಹೆಚ್ಚಿಸಿಕೊಂಡು ಇತಿಹಾಸ ನಿರ್ಮಿಸಿದ ಕಮಲ ಪಡೆ

ಈ ಸುದ್ದಿಯನ್ನು ಶೇರ್ ಮಾಡಿ

bjp

ನವದೆಹಲಿ, ಆ.5- ರಾಜ್ಯಸಭೆ ಯಲ್ಲಿ ಬಿಜೆಪಿ ತನ್ನ ಸದಸ್ಯರ ಬಲವನ್ನು ಹೆಚ್ಚಿಸಿಕೊಂಡಿದೆ. ಈ ಮೂಲಕ ಕಾಂಗ್ರೆಸ್ ಪಕ್ಷವನ್ನು ಹಿಂದಿಕ್ಕಿ ಇತಿಹಾಸ ನಿರ್ಮಿಸಿದೆ.
ಮೋದಿ ಅವರ ಕನಸಿನಂತೆ ಉಭಯ ಸದನಗಳಲ್ಲಿ ಆಡಳಿತಾರೂಢ ಎನ್ ಡಿಎ ಅಗ್ರಸ್ಥಾನಕ್ಕೇರಿದೆ. ಬಿಜೆಪಿ ಈಗ 58 ಸದಸ್ಯರನ್ನು ಪಡೆದಿದ್ದು, 57 ಸದಸ್ಯರನ್ನು ಕಾಂಗ್ರೆಸ್ ಹೊಂದಿದೆ. ಮಧ್ಯಪ್ರದೇಶದಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿ ಸಂಪಾತಿಯಾ ಯುಕಿ ಅವರು ಗೆಲುವು ಸಾಧಿಸುತ್ತಿದ್ದಂತೆ ಬಿಜೆಪಿ ಬಲ ಹೆಚ್ಚಳವಾಯಿತು. ಅನಿಲ್ ಮಾಧವ್ ದವೆ ಅವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಉಪ ಚುನಾವಣೆ ನಡೆಸಲಾಗಿತ್ತು.

2014ರಲ್ಲಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಬಳಿಕ ಇದೇ ಮೊದಲ ಬಾರಿಗೆ ರಾಜ್ಯಸಭೆಯಲ್ಲಿ ಬಿಜೆಪಿ ಅತ್ಯಂತ ಹೆಚ್ಚು ಸದಸ್ಯ ಬಲ ಹೊಂದಿರುವ ಪಕ್ಷವಾಗಿ ಹೊರಹೊಮ್ಮಿದೆ. 245 ಸದಸ್ಯ ಬಲದ ಮೇಲ್ಮನೆಯಲ್ಲಿ ಒಂದು ಸ್ಥಾನದಿಂದ ಅಗ್ರಸ್ಥಾನ ತಪ್ಪಿಸಿಕೊಂಡಿದ್ದ ಬಿಜೆಪಿ 2018ರ ತನಕ ಕಾಯಬೇಕಾಗಿತ್ತು. ಆದರೆ, ಉಪ ಚುನಾವಣೆಗಳಲ್ಲಿ ಗೆಲ್ಲುವ ಮೂಲಕ ಬಿಜೆಪಿ ತನ್ನ ಬಲ ಹೆಚ್ಚಿಸಿಕೊಂಡಿದೆ.

ಸ್ವಾತಂತ್ರ್ಯನಂತರದಲ್ಲಿ ಬಿಜೆಪಿ ರಾಜ್ಯಸಭೆಯಲ್ಲಿ ಹೆಚ್ಚು ಸ್ಥಾನಗಳನ್ನು ಹೊಂದಿದ್ದು ಇದೇ ಮೊದಲ ಬಾರಿ. ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದ ರಾಜ್ಯ ಸಭೆಯಲ್ಲಿ ಬಿಜೆಪಿ 50 ಸ್ಥಾನಗಳನ್ನು ಹೊಂದಿತ್ತು. ಪ್ರಸ್ತುತ ರಾಜ್ಯಸಭೆಯಲ್ಲಿ ಬಿಜೆಪಿ 58 ಸಂಸದರನ್ನು ಹೊಂದಿದೆ. ಕಾಂಗ್ರೆಸ್ 57, ಸಮಾಜವಾದಿ ಪಕ್ಷ 18, ಎಐಎಡಿಎಂಕೆ 13, ತೃಣಮೂಲ ಕಾಂಗ್ರಸ್ 12, ಜೆಡಿಯು 10 ಸ್ಥಾನಗಳನ್ನು ಹೊಂದಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin