ವನ್ಯಜೀವಿಗಳ ಚರ್ಮ ಮಾರಾಟ ಮಾಡಲೆತ್ನಿಸುತ್ತಿದ್ದ 5 ಮಂದಿ ಬಂಧನ

5-Arested--01

ಬೆಂಗಳೂರು, ಆ.5- ಕಾನೂನು ಬಾಹಿರವಾಗಿ ವಿವಿಧ ವನ್ಯಜೀವಿಗಳ ಚರ್ಮವನ್ನು ಚೀಲದಲ್ಲಿ ತುಂಬಿಕೊಂಡು ಮಾರಾಟ ಮಾಡಲು ಹೊಂಚು ಹಾಕುತ್ತಿದ್ದ ಐದು ಮಂದಿಯನ್ನು ಆರ್‍ಎಂಸಿ ಯಾರ್ಡ್ ಪೊಲೀಸರು ಬಂಧಿಸಿದ್ದಾರೆ. ಲಿಂಗರಾಜಪುರದ ಏಜಾಜ್ (28), ಆರ್‍ಎಸ್ ಪಾಳ್ಯದ ಜಾನ್ (30), ಎಡ್ವಿನ್ (26), ಮೊಹಮ್ಮದ್ ಜುಬೇದ್ (30) ಮತ್ತು ಕೆಜಿಎಫ್‍ನ ಅರವಿಂದ್ ಕುಮಾರ್ (28) ಬಂಧಿತ ಆರೋಪಿಗಳಾಗಿದ್ದು, ಇವರಿಂದ ಜಿಂಕೆ ಮತ್ತು ಚಿರತೆ ಚರ್ಮವನ್ನು ವಶಪಡಿಸಿಕೊಂಡಿದ್ದಾರೆ.

ಕೆಇಬಿ ಕ್ವಾಟ್ರರ್ಸ್‍ನ ಎಸ್‍ಆರ್‍ಎಸ್ ಬಳಿ ಐದು ಮಂದಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಬಗ್ಗೆ ಸ್ಥಳೀಯರು ಆರ್‍ಎಂಸಿ ಯಾರ್ಡ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಖಚಿತ ಮಾಹಿತಿ ಆಧರಿಸಿದ ಪೊಲೀಸರು ಸ್ಥಳಕ್ಕೆ ತೆರಳಿ ಈ ಐದು ಮಂದಿಯನ್ನು ಬಂಧಿಸಿ ಚೀಲದಲ್ಲಿದ್ದ ಜಿಂಕೆ ಮತ್ತು ಚಿರತೆ ಚರ್ಮವನ್ನು ವಶಪಡಿಸಿಕೊಂಡಿದ್ದಾರೆ.  ಇನ್ಸ್‍ಪೆಕ್ಟರ್ ಮಹಮ್ಮದ್ ಮುಕಾರಾಂ, ಪಿಎಸ್‍ಐ ರಘುಪ್ರಸಾದ್ ಮತ್ತು ಸಿಬ್ಬಂದಿ ಈ ಕಾರ್ಯಾಚರಣೆ ಕೈಗೊಂಡಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin