ವಿವಿಧ ಹಗರಣಗಳಲ್ಲಿ ಲಕ್ಷಾಂತರ ಕೋಟಿ ರೂ. ಲೂಟಿ : ಸಂತೋಷ್ ಹೆಗಡೆ

ಈ ಸುದ್ದಿಯನ್ನು ಶೇರ್ ಮಾಡಿ

Santosh-Hegde-01

ಬೆಂಗಳೂರು, ಆ.5- ಈ ಹಿಂದೆ ದೇಶದಲ್ಲಿ ನಡೆದಿರುವ 2ಜಿ ಹಗರಣ, ಬೋಫರ್ಸ್ ಹಗರಣ, ಕಲ್ಲಿದ್ದಲು , ಭಾರತ್ ಬ್ಯಾಂಕ್ ಹಗರಣ ಸೇರಿದಂತೆ ಅನೇಕ ಹಗರಣಗಳಲ್ಲಿ ಲಕ್ಷಾಂತರ ಕೋಟಿ ರೂ. ಲೂಟಿ ಮಾಡಲಾಗಿದೆ ಎಂದು ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಆರೋಪಿಸಿದರು.
ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ಮೊದಲ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಆಶಯ ನುಡಿಗಳನ್ನಾಡಿದ ಅವರು, ಇಂಥ ಲೂಟಿಗಳಿಂದ ದೇಶದ ಆರ್ಥಿಕ ಪರಿಸ್ಥಿತಿಯ ಮೇಲೆ ಅತ್ಯಂತ ಕೆಟ್ಟ ಪರಿಣಾಮ ಬೀರಲಿದೆ ಎಂದು ವಿಷಾದಿಸಿದರು.

ಸರ್ಕಾರದ ದೇಶದ ಅಭಿವೃದ್ಧಿಗಾಗಿ ಬಜೆಟ್‍ನಲ್ಲಿ ಸಾವಿರಾರು ಕೋಟಿ ಹಣವನ್ನು ನಿಗದಪಡಿಸುತ್ತದೆ. ಆದರೆ ಫಲಾನುಭವಿಗಳಿಗೆ ದೊರೆಯುತ್ತಿರುವುದು ಅತ್ಯಲ್ಪ. ಶೇ.20ರಷ್ಟು ಮಾತ್ರ ಜನರಿಗೆ ತಲುಪುತ್ತಿದ್ದು , ಇನ್ನುಳಿದ 80ರಷ್ಟು ಭ್ರಷ್ಟಾಚಾರದ ಮೂಲಕ ಲೂಟಿಯಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.
ಭ್ರಷ್ಟಾಚಾರ ನಿಯಂತ್ರಣಕ್ಕಾಗಿ ರೂಪಿಸಿರುವ ಕಾನೂನುಗಳು ಸಮರ್ಪಕವಾಗಿ ಅನುಷ್ಠಾನವಾಗದ ಕಾರಣ ಭ್ರಷ್ಟಾಚಾರ ನಿಯಂತ್ರಣ ಸಾಧ್ಯವಾಗುತ್ತಿಲ್ಲ ಎಂದ ಅವರು, ಇದರ ನಿಯಂತ್ರಣಕ್ಕೆ ಕಾನೂನಿನೊಂದಿಗೆ ಜನಸಾಮಾನ್ಯರು ಜಾಗೃತರಾಗಬೇಕಿದೆ ಎಂದು ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin