ಶಾಸಕ ಪುಟ್ಟಣ್ಣಯ್ಯಗೆ ಗ್ರಾಮಸ್ಥರಿಂದ ತರಾಟೆ

Ravendra--01

ಪಾಂಡವಪುರ, ಆ.5- ಸುಮಾರು 12 ಲಕ್ಷ ರೂ. ವೆಚ್ಚದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಭೂಮಿ ಪೂಜೆ ನೆರವೇರಿಸಲು ತಾಲೂಕಿನ ಸೆಣಬ ಗ್ರಾಮಕ್ಕೆ ತೆರಳಿದ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಅವರನ್ನು ಗ್ರಾಮಸ್ಥರು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.

ಗ್ರಾಮಕ್ಕೆ ಭೇಟಿ ನೀಡಿದ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಅವರನ್ನು ಕುರಿತು ಗ್ರಾಮಸ್ಥರು ಬರ ಹೊಡೆದು ಕೂತದೇ, ಕೆರೆ-ಕಟ್ಟೆಗಳಿಗೆ ನೀರು ತುಂಬಿಸಲು ಆಗದ ನೀವು ಗುದ್ದಲಿ ಪೂಜೆ ಮಾಡೋಕೆ ಮಾತ್ರ ಬಂದಿದ್ದೀರಿ, ಗೆದ್ದ ನಂತರ 5 ವರ್ಷದಿಂದ ಏನನ್ನು ಮಾಡದ ನೀವು ಈಗ ನಮ್ಮ ಗ್ರಾಮಕ್ಕೆ ಬಂದಿದ್ದೀರಾ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಅದಕ್ಕೆ ನಿವ್ಯಾರು ನನ್ನನ್ನು ಕೇಳೋಕೆ ಎಂದು ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಕೇಳಿದರು. ಆಗ ಗ್ರಾಮಸ್ಥರು, ನಾವು ನಿಮಗೆ ಓಟು ಹಾಕಿರುವುದಕ್ಕೆ ಕೇಳುತ್ತಿದ್ದೇವೆ, ಓಟು ಹಾಕೋಕೆ ನಾವುಗಳು ಬೇಕು, ಬೇರೆದಕ್ಕೆ ನಾವು ಬೇಡವೇ ಎಂದು ಕಿಡಿಕಾರಿದರು. ಮತ್ತೆ ಮರು ಮಾತನಾಡದ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ತಮ್ಮ ವಾಹನವನ್ನೇರಿ ಅಲ್ಲಿಂದ ಹೊರಟರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin