ಹಠಮಾರಿ ಉತ್ತರ ಕೊರಿಯಾಗೆ ಮೂಗುದಾರ ಹಾಕಲು ಮುಂದಾದ ವಿಶ್ವಸಂಸ್ಥೆ

North-Korea--01

ವಿಶ್ವಸಂಸ್ಥೆ, ಆ.5-ಪದೇ ಪದೇ ವಿನಾಶಕಾರಿ ಅಣ್ವಸ್ತ್ರ ಕ್ಷಿಪಣಿಗಳ ಪರೀಕ್ಷೆಗಳನ್ನು ನಡೆಸುತ್ತಾ ಜಗತ್ತಿಗೆ ಆತಂಕ ಸೃಷ್ಟಿಸುತ್ತಿರುವ ಹಠಮಾರಿ ಉತ್ತರ ಕೊರಿಯಾ ವಿರುದ್ಧ ಅತ್ಯುಗ್ರ ಕ್ರಮಕ್ಕೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಮುಂದಾಗಿದೆ. ಯುದ್ಧೋನ್ಮಾದ ಉತ್ತರ ಕೊರಿಯಾ ಮೇಲೆ ಕಠಿಣ ದಿಗ್ಬಂಧನಗಳನ್ನು ವಿಧಿಸುವ ಅಮೆರಿಕದ ಕರಡು ನಿರ್ಣಯಕ್ಕೆ ಇಂದು ಸಂಯುಕ್ತ ರಾಷ್ಟ್ರಗಳ ವೇದಿಕೆ ಸಮ್ಮತಿ ನೀಡಲಿದೆ. ಕೆಲವು ರಫ್ತುಗಳನ್ನು ನಿಷೇಧಿಸಲು ಈ ಗೊತ್ತುವಳಿಯಲ್ಲಿ ಉದ್ದೇಶಿಸಲಾಗಿದ್ದು, ಇದರಿಂದ ಪಯೊಂಗ್‍ಯಾಂಗ್‍ಗೆ ವಾರ್ಷಿಕ ಒಂದು ಶತಕೋಟಿ ಡಾಲರ್ ಆದಾಯ ಖೋತಾ ಆಗಲಿದೆ. ಈ ನಿರ್ಣಯದ ಪರ ಬೆಂಬಲಿಸಿ ಬಹುತೇಕ ರಾಷ್ಟ್ರಗಳು ಯುಎನ್‍ಎಸ್‍ಸಿ ಸಭೆಯಲ್ಲಿ ಮತ ಚಲಾಯಿಸಲಿವೆ.

ಏಷ್ಯಾ ಖಂಡ ಸೇರಿದಂತೆ ವಿವಿಧ ದೇಶಗಳಿಗೆ ಆತಂಕ ಸೃಷ್ಟಿಸುವ ರೀತಿಯಲ್ಲಿ ಕ್ಷಿಪಣಿಗಳು ಮತ್ತು ಆಣ್ವಸ್ತ್ರಗಳನ್ನು ಪರೀಕ್ಸಿಸುತ್ತಿರುವ ಉತ್ತರ ಕೊರಿಯಾಗೆ ಹಲವಾರು ಬಾರಿ ಎಚ್ಚರಿಕೆ ನೀಡಿದ್ದರೂ, ಲೆಕ್ಕಿಸದೇ ಉದ್ಧಟತನ ತೋರುತ್ತಿರುವ ಪಯೊಂಗ್‍ಯಾಂಗ್‍ಗೆ ಬುದ್ದಿ ಕಲಿಸಲು ಅಮೆರಿಕ ನಿರ್ಧರಿಸಿದೆ. ಉತ್ತರ ಕೊರಿಯಾದ ಪ್ರಮುಖ ವಾಣಿಜ್ಯ ಪಾಲುದಾರ ದೇಶವಾದ ಚೀನಾ ಮತ್ತು ನೆರೆಹೊರೆ ದೇಶಗಳೊಂದಿಗೆ ಈ ಸಂಬಂಧ ಮಾತುಕತೆ ನಡೆಸಿ ಪಯೊಂಗ್‍ಯಾಂಗ್ ಮೇಲೆ ಆರ್ಥಿಕ ದಿಗ್ಬಂಧನಕ್ಕೆ ಸಹಕಾರ ನೀಡುವಂತೆ ಮನವೊಲಿಸುವಲ್ಲಿ ಅಮೆರಿಕ ಯಶಸ್ವಿಯಾಗಿದೆ. ಇದರ ಮುಂದಿನ ಕ್ರಮವಾಗಿ ಹೊಸ ನಿರ್ಣಯಕ್ಕೆ ಬೆಂಬಲ ಸೂಚಿಸಲು ಇದು ಸಂಜೆ ಮತ ಪ್ರಕ್ರಿಯೆಗೆ ವೇದಿಕೆ ಸಜ್ಜಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin