20 ವರ್ಷಗಳ ಬಳಿಕ ಪಾಕಿಸ್ತಾನ ಕ್ಯಾಬಿನೆಟ್’ನಲ್ಲಿ ಹಿಂದೂ ವ್ಯಕ್ತಿಗೆ ಸಿಕ್ತು ಸಚಿವ ಸ್ಥಾನ

Darshan-Lal-01

ಇಸ್ಲಾಮಾಬಾದ್‍ಆ.5- ಪಾಕಿಸ್ತಾನದ ನೂತನ ಪ್ರಧಾನಿ ಶಹೀದ್ ಖಾಕನ್ ಅಬ್ಬಾಸಿ ಅವರು ಸರಕಾರದ ಸಚಿವ ಸಂಪುಟವನ್ನು ಶುಕ್ರವಾರ ರಚಿಸಿದ್ದು, ಮಾಜಿ ಪ್ರಧಾನಿ ನವಾಜ್ ಶರೀಫ್ ಆಪ್ತರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. 20 ವರ್ಷಗಳ ಬಳಿಕ ಹಿಂದೂ ಧರ್ಮದ ದರ್ಶನ್‍ಲಾಲ್ ಪಾಕಿಸ್ತಾನದ ಸರಕಾರದಲ್ಲಿ ಸ್ಥಾನ ಪಡೆದಿದ್ದಾರೆ. ಸಿಂಧ್ನ ಘಾಟ್ಕಿ ಜಿಲ್ಲೆಯ ಮೀರ್ಪುರ ಮಥೇಲೊ ಪಟ್ಟಣದ 65ರ ಪ್ರಾಯದ ದರ್ಶನ್‍ಲಾಲ್ 2013ರಲ್ಲಿ ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ ಪಕ್ಷದಿಂದ ಅಲ್ಪಸಂಖ್ಯಾತರಿಗೆ ಮೀಸಲಾಗಿರುವ ಕ್ಷೇತ್ರದಿಂದ ಎರಡನೆ ಬಾರಿ ರಾಷ್ಟ್ರೀಯ ಅಸೆಂಬ್ಲಿಗೆ ಚುನಾಯಿತರಾಗಿದ್ದರು.

ದರ್ಶನ್ ಪಾಕಿಸ್ತಾನದ ನಾಲ್ಕು ಪ್ರಾಂತ್ಯಗಳ ನಡುವೆ ಮುಖ್ಯ ಸಮನ್ವಯಕಾರರಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಸರಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇಸ್ಲಾಮಾಬಾದ್‍ನ್ನಲ್ಲಿರುವ ಅಧ್ಯಕ್ಷರ ಭವನದಲ್ಲಿ ನಡೆದ ಸಮಾರಂಭದಲ್ಲಿ ಪಾಕ್ ಅಧ್ಯಕ್ಷ ಮಮ್ನೂನ್ ಹುಸೈನ್ 28 ಫೆಡರಲ್ ಸಚಿವರು ಹಾಗೂ 18 ರಾಜ್ಯ ಸಚಿವರಿಗೆ ಅಧಿಕಾರ ಪ್ರಮಾಣವಚನ ಬೋಧಿಸಿದರು. ಶರೀಫ್ ಸಂಪುಟದಲ್ಲಿದ್ದ ಬಹುತೇಕರನ್ನು ಉಳಿಸಿಕೊಳ್ಳಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin