ಅಧೀನ ನ್ಯಾಯಾಂಗದ ಅಖಿಲ ಭಾರತ ಸೇವೆಗೆ 9 ಹೈಕೋರ್ಟ್‍ಗಳ ವಿರೋಧ

ಈ ಸುದ್ದಿಯನ್ನು ಶೇರ್ ಮಾಡಿ

Modi--.121

ನವದೆಹಲಿ, ಆ.6-ಅಧೀನ ನ್ಯಾಯಾಂಗಕ್ಕಾಗಿ ಅಖಿಲ-ಭಾರತ ಸೇವೆ ಹೊಂದುವ ಪ್ರಸ್ತಾವನೆಗೆ ಕರ್ನಾಟಕ ಸೇರಿದಂತೆ ಒಂಭತ್ತು ಹೈಕೋರ್ಟ್‍ಗಳು ವಿರೋಧ ವ್ಯಕ್ತಪಡಿಸಿವೆ. ಈ ಉದ್ದೇಶಕ್ಕೆ ಇತರ ಎಂಟು ಉಚ್ಚ ನ್ಯಾಯಾಲಯಗಳು ಬದಲಾವಣೆಗಳನ್ನು ಆಪೇಕ್ಷಿಸಿದ್ದರೆ, ಕೇವಲ ಎರಡು ಹೈಕೋರ್ಟ್‍ಗಳು ಮಾತ್ರ ಈ ಆಲೋಚನೆಗೆ ಸಂಪೂರ್ಣ ಬೆಂಬಲ ಸೂಚಿಸಿವೆ. ಅಲ್ಲದೇ, ಅಧೀನ ನ್ಯಾಯಾಂಗದ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಲು ಬಹುತೇಕ 24 ಹೈಕೋರ್ಟ್‍ಗಳು ಒಲವು ವ್ಯಕ್ತಪಡಿಸಿವೆ.

ಕಾನೂನು ಸಚಿವಾಲಯದ ದಾಖಲೆಪತ್ರವು ಈ ಕುರಿತು ವ್ಯಕ್ತವಾಗಿರುವ ನಿಲುವುಗಳನ್ನು ಬಹಿರಂಗಗೊಳಿಸಿದೆ. ಕಾನೂನು ಮತ್ತು ನ್ಯಾಯ ಕುರಿತ ಸಂಸದೀಯ ಸಲಹಾ ಸಮಿತಿಯ ಎಲ್ಲ ಸದಸ್ಯರುಗಳಿಗೆ ಈ ಸಂಬಂಧ ದಾಖಲೆಯನ್ನು ರವಾನಿಸಲಾಗಿದೆ. ದೇಶದಲ್ಲಿನ ಕೆಳ ಹಂತದ ನ್ಯಾಯಾಂಗಗಳು (ಕೋರ್ಟ್‍ಗಳು) ಪ್ರತ್ಯೇಕ ಶ್ರೇಣಿಯನ್ನು ಹೊಂದಲು ಹೊಸ ಸೇವೆಯನ್ನು ರಚಿಸಬೇಕೆಂಬ ದೀರ್ಘಕಾಲ ನೆನೆಗುದಿಗೆಯಲ್ಲಿದ್ದ ಪ್ರಸಾವನೆಗೆ ಚಾಲನೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಚಾಲನೆ ನೀಡಿದೆ. 1960ರಲ್ಲಿ ಮೊದಲ ಬಾರಿಗೆ ಈ ಪ್ರಸ್ತಾವನೆ ಪರಿಕಲ್ಪನೆ ರೂಪುಗೊಂಡಿತ್ತು.

ದಾಖಲೆಗಳ ಪ್ರಕಾರ, ಕರ್ನಾಟಕ, ಆಂಧ್ರಪ್ರದೇಶ, ಮುಂಬೈ, ದೆಹಲಿ, ಗುಜರಾತ್, ಮಧ್ಯ ಪ್ರದೇಶ, ಪಾಟ್ನಾ ಹಾಗೂ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‍ಗಳು ಅಖಿಲ ಭಾರತ ನ್ಯಾಯಾಂಗ ಸೇವೆ (ಎಐಜೆಎಸ್) ಆಲೋಚನೆಗೆ ಒಲವು ವ್ಯಕ್ತಪಡಿಸಿಲ್ಲ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin