ಉಪರಾಷ್ಟ್ರಪತಿ ಚುನಾವಣೆಯಲ್ಲಿ ವೆಂಕಯ್ಯನಾಯ್ಡು ಪರ ಅಡ್ಡಮತದಾನ, ವಿಪಕ್ಷದಲ್ಲಿ ಒಡಕು

ಈ ಸುದ್ದಿಯನ್ನು ಶೇರ್ ಮಾಡಿ

Venkaiaha-Naidu--01

ನವದೆಹಲಿ,ಆ.6-ಉಪರಾಷ್ಟ್ರಪತಿ ಚುನಾವಣೆಯಲ್ಲಿ ಅಡ್ಡ ಮತದಾನ ನಡೆದಿರುವುದು ಸಾಬೀತಾಗುತ್ತಿದ್ದಂತೆ ವಿಪಕ್ಷದಲ್ಲಿ ಒಡಕು ಮೂಡಿರುವುದು ಸ್ಪಷ್ಟವಾಗುತ್ತಿದೆ. ಸುಮಾರು 24 ಜನ ಪ್ರತಿಪಕ್ಷಗಳ ಸಂಸದರು ಬಿಜೆಪಿ ಅಭ್ಯರ್ಥಿ ವೆಂಕಯ್ಯ ನಾಯ್ಡು ಪರ ಮತ ಚಲಾಯಿಸಿದ್ದಾರೆ ಎಂಬುದು ಬಯಲಾಗಿದ್ದು , ಗುಪ್ತ ಮತದಾನವಾಗಿರುವುದರಿಂದ ಯಾರು ಈ ಅಡ್ಡ ಮತದಾನ ಮಾಡಿದ್ದಾರೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.

ನಿರೀಕ್ಷೆಗೂ ಮೀರಿದ ಮತಗಳನ್ನು ಪಡೆದ ಬಗ್ಗೆ ಬಿಜೆಪಿಯೇ ಅಚ್ಚರಿ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಉತ್ತರ ಭಾರತದ ಕೆಲ ಕಾಂಗ್ರೆಸ್ ಹಾಗೂ ಎಸ್ಪಿ ಸಂಸದರು ಅಡ್ಡ ಮತದಾನ ಮಾಡಿರಬಹುದೆಂದು ಶಂಕೆ ವ್ಯಕ್ತವಾಗಿದ್ದು , ಇದು ನವದೆಹಲಿಯಲ್ಲಿ ಸಂಚಲನ ಸೃಷ್ಟಿಸಿದೆ. ಈಗಾಗಲೇ ಗುಜರಾತ್‍ನಲ್ಲಿ 6 ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿದ ನಂತರ ಕೈ ಪಾಳೆಯದಲ್ಲಿ ಆತಂಕ ಸೃಷ್ಟಿಯಾಗಿತ್ತು. ಈ ನಡುವೆ ಆ.8ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಅಹಮ್ಮದ್ ಪಟೇಲ್ ಅವರನ್ನು ಗೆಲ್ಲಿಸಬೇಕೆಂಬ ತಂತ್ರದಲ್ಲಿ ಈಗಾಗಲೇ 40ಕ್ಕೂ ಹೆಚ್ಚು ಶಾಸಕರು ಕರ್ನಾಟಕದಲ್ಲಿದ್ದಾರೆ.

ಶಂಕರ್ ಸಿಂಗ್ ವಘೇಲ ಅವರ ಬೆಂಬಲದಲ್ಲಿ ಕೆಲ ಸಂಸದರು ಕೂಡ ಈ ಅಡ್ಡ ಮತದಾನದಲ್ಲಿ ಭಾಗಿಯಾಗಿರಬಹುದೆಂದು ಕೂಡ ಹೇಳಲಾಗುತ್ತಿದೆ.
ಶನಿವಾರ ನಡೆದ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವೆಂಕಯ್ಯ ನಾಯ್ಡು ಅವರು ಗೆಲುವು ಸಾಧಿಸಿದ್ದಾರೆ. ಒಟ್ಟು 760 ಮತಗಳಲ್ಲಿ ವೆಂಕಯ್ಯ ನಾಯ್ಡು 516 ಮತಗಳು ಪಡೆದು ಜಯ ದಾಖಲಿಸಿದ್ದಾರೆ. ಇತ್ತ, ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಗೋಪಾಲಕೃಷ್ಣ ಗಾಂಧಿ 244 ಮತ ಪಡೆದುಕೊಂಡಿದ್ದಾರೆ.

ನಾಯ್ಡುಗೆ ಅಭಿನಂದನೆಗಳ ಸುರಿಮಳೆ:

ಉಪ ರಾಷ್ಟ್ರಪತಿ ಚುನಾವಣೆಯ ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ವೆಂಕಯ್ಯ ನಾಯ್ಡು ಅವರಿಗೆ ಪಕ್ಷಬೇಧ ಮರೆತು ಅಭಿನಂದನೆಗಳ ಸುರಿಮಳೆ ಹರಿದಿದೆ.  ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಜೆಡಿಯು ಮುಖಂಡ ಶರದ್ ಯಾದವ್, ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು, ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್, ಕರ್ನಾಟಕ ಸಿಎಂ ಸಿದ್ದರಾಮಯ್ಯ, ಛತ್ತೀಸ್ಘ್‍ಡ್ ಸಿಎಂ ರಮಣ್ ಸಿಂಗ್, ಗೋವಾ ಸಿಎಂ ಮನೋಹರ್ ಪರಿಕ್ಕರ್, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಸುಷ್ಮಾ ಸ್ವರಾಜ್ ಹಾಗೂ ಬಹುಭಾಷಾ ನಟ ರಜನಿಕಾಂತ್ ಸೇರಿದಂತೆ ಹಲವು ಗಣ್ಯರು ವೆಂಕಯ್ಯ ನಾಯ್ಡು ಅವರನ್ನು ಅಂಭಿನಂದಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin