ಕಂಚಿನ ಪದಕಕ್ಕೆ ತೃಪ್ತಿಪಟ್ಟ ವೇಗದ ಓಟಗಾರ ಉಸೇನ್ ಬೋಲ್ಟ್

Bolt--01

ಲಂಡನ್, ಆ.6- ಅಮೆರಿಕದ ಶ್ರೇಷ್ಠ ಓಟಗಾರ ಗಾಲ್ಟಿನ್ ಅವರು ಇಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‍ಷಿಪ್‍ನ 100 ಮೀಟರ್ ಓಟದಲ್ಲಿ ಚಿನ್ನದ ಪದಕಗಳನ್ನು ಗೆದ್ದುಕೊಂಡರೆ ಉಸೇನ್ ಬೋಲ್ಟ್ ಅವರು ಕಂಚಿನ ಪದಕಕ್ಕೆ ತೃಪ್ತಿಪಟ್ಟುಕ್ಡೊಂಡಿದ್ದಾರೆ.ಕಳೆದ ಎರಡು ವಿಶ್ವ ಚಾಂಪಿಯನ್‍ನಲ್ಲೂ ಉಸೇನ್ ಬೋಲ್ಟ್ ಅವರು ಈ ವಿಭಾಗದಲ್ಲಿ ಚಿನ್ನದ ಪದಕಗಳನ್ನು ಗೆದ್ದು ಬೀಗಿದ್ದರೆ ಗಾಲ್ಟಿನ್ ಬೆಳ್ಳಿ ಪದಕಕ್ಕೆ ಭಾಜರಾಗಿದ್ದರು. ಆದರೆ ಇಂದು ನಡೆದ ಓಟದಲ್ಲಿ ಗಾಲ್ಟಿನ್ ಕೇವಲ 9.92 ಸೆಕೆಂಡ್‍ಗಳಲ್ಲಿ ಗೆಲುವಿನ ಗೆರೆಯನ್ನು ಮುಟ್ಟಿ ಪ್ರಥಮ ಸ್ಥಾನಿಯಾದರೆ, ಅಮೆರಿಕಾದವರೇ ಆದ ಕ್ರಿನಾ ಕೋಲೆಮನ್ 9.94 ಹಾಗೂ ಉಸೇನ್ ಬೋಲ್ಟ್ 9.95 ಸೆಕೆಂಡ್‍ಗಳಲ್ಲಿ ಗೆಲುವು ಸಾಧಿಸಿ ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡರು.

ಕ್ಷಮೆ ಯಾಚಿಸಿದ ಬೋಲ್ಟ್:

ನನ್ನನ್ನು ಕ್ಷಮಿಸಿ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‍ಷಿಪ್‍ನ ಫೈನಲ್‍ನಲ್ಲಿ ಚಿನ್ನದ ಪದಕವನ್ನು ಜಯಿಸಲು ಆಗಲಿಲ್ಲ , ಆದರೆ ನೀವು ಕೊಟ್ಟ ಸಹಕಾರವನ್ನು ನಾನು ಎಂದೆಂದಿಗೂ ಮರೆಯುವುದಿಲ್ಲ ಎಂದರು.

ದಾಖಲೆಗಳ ಸರದಾರ:

ವಿಶ್ವದ ಓಟಗಾರರ ಸಾಲಿನಲ್ಲಿ ಮೊದಲೇ ಸಾಲಿನಲ್ಲಿ ನಿಲ್ಲುವ ಚಿಗರೆ ಖ್ಯಾತಿಯ ಉಸೇನ್ ಬೋಲ್ಟ್ ಅವರು ತಮ್ಮ ವೃತ್ತಿಜೀವನದಲ್ಲಿ ಅನೇಕ ದಾಖಲೆಯನ್ನು ನಿರ್ಮಿಸಿದ್ದಾರೆ. 12 ಬಾರಿ 100 ಮೀಟರ್‍ನಲ್ಲಿ ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡಿರುವುದೇ ಅಲ್ಲದೆ 100 ಮೀಟರ್ ( 9.58 ಸೆಕೆಂಡ್) ಹಾಗೂ 200 ಮೀಟರ್ (19.19 ಸೆಕೆಂಡ್) ಅತಿ ಕಡಿಮೆ ಸಮಯದಲ್ಲಿ ಗುರಿ ಮುಟ್ಟಿದ ಓಟಗಾರ ಎಂಬ ದಾಖಲೆಯನ್ನು ನಿರ್ಮಿಸಿದ್ದಾರೆ.
ಆದರೆ ತಮ್ಮ ಜೀವನದ ಕೊನೆಯ ಪಂದ್ಯವೆಂದೇ ಬಿಂಬಿಸಿಕೊಂಡಿದ್ದ ಪಂದ್ಯದಲ್ಲಿ ಬೋಲ್ಟ್ ಕಂಚಿನ ಪದಕಕ್ಕೆ ಕುಸಿದಿರುವುದು ಅವರ ಅಪಾರ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ. ಜಮೈಕಾದ ಓಟಗಾರ ಬೋಲ್ಟ್ 34 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ವಿಜೇತರಾಗಿರುವುದೇ ಅಲ್ಲದೆ ಇದರಲ್ಲಿ 25 ಚಿನ್ನದ ಪದಕ, 7 ಬೆಳ್ಳಿ ಹಾಗೂ 2 ಕಂಚು ಪದಕಗಳು ಸೇರಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin