ಕೌಟುಂಬಿಕ ಕಲಹ : ಮೈಸೂರಿನಲ್ಲೊಂದು ಜೋಡಿ ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

Coule-Suicide

ಮೈಸೂರು,ಆ.6- ಇಲ್ಲಿನ ಮನೆಯೊಂದರಲ್ಲಿ ಇಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೃತರನ್ನು ವೆಂಕಟೇಶ್(34) ಹಾಗೂ ಆಶಾ(25) ಎಂದು ತಿಳಿದುಬಂದಿದೆ. ಕುಂಬಾರಕೊಪ್ಪಲಿನಲ್ಲಿ ಇಂದು ಬೆಳಗ್ಗೆ ಹಾಲು ಮಾರುವವರು ಬಂದಾಗ ನೇಣು ಹಾಕಿಕೊಂಡಿರುವುದನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಘಟನೆ ವಿವರ:

ಕಾರು ಚಾಲಕನಾಗಿರುವ ವೆಂಕಟೇಶ್ ಕಳೆದ ನಾಲ್ಕು ವರ್ಷಗಳ ಹಿಂದೆ ವಿವಾಹವಾಗಿದ್ದರು. ಕೌಟುಂಬಿಕ ಕಲಹ ಏರ್ಪಟ್ಟ ಹಿನ್ನೆಲೆಯಲ್ಲಿ ಪತ್ನಿ ಅವರನ್ನು ತೊರೆದಿದ್ದರು. ವಿಚ್ಛೇದನ ಬಯಸಿ ನ್ಯಾಯಾಲಯಕ್ಕೆ ದಾವೆ ಕೂಡ ಹೂಡಿದ್ದರು. ಇದರ ನಡುವೆ ಅವರ ಸಂಬಂಧಿಯಾದ ಆಶಾ ಇವರ ಮನೆಗೆ ಬಂದು ನೆಲೆಸಿದ್ದರು…ನಿನ್ನೆ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗಿದ್ದ ವೆಂಕಟೇಶ್ ನಂತರ ಮನೆಗೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನು ನೋಡಿದ ಆಶಾ ಕೂಡ ನೇಣು ಹಾಕಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.  ಮೇಟಿಗಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin