ಗಡಿಯಲ್ಲಿ ಉಗ್ರರ ನಿರಂತರ ಅಟ್ಟಹಾಸ, ಯೋಧರಿಗೆ ಗಾಯ

Firing--014

ನೌಗಾಮ್, ಆ.6-ಕಣಿವೆನಾಡು ಕಾಶ್ಮೀರದಲ್ಲಿ ಭಯೋತ್ಪಾದಕರ ನಿಗ್ರಹ ಕಾರ್ಯಾಚರಣೆಯನ್ನು ಯೋಧರು ತೀವ್ರಗೊಳಿಸಿದ್ದರೂ, ಉಗ್ರರ ಅಟ್ಟಹಾಸ ಮುಂದುವರಿದಿದೆ. ಜಮ್ಮು ಮತ್ತು ಕಾಶ್ಮೀರದ ನೌಗಾಮ್‍ನಲ್ಲಿ ನಿನ್ನೆ ರಾತ್ರಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‍ಪಿಎಫ್) ಹಾಗೂ ಜೆ ಅಂಡ್ ಕೆ ಪೊಲೀಸರ ಮೇಲೆ ಬೈಕ್‍ನಲ್ಲಿ ಬಂದ ಉಗ್ರಗಾಮಿಗಳು ನಡೆಸಿದ ದಾಳಿಯಲ್ಲಿ ಕೆಲವರಿಗೆ ಗಾಯಗಳಾಗಿವೆ. ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ 29 ಬಿಎನ್ ಸಿಆರ್‍ಪಿಎಫ್‍ನ ವೈರ್‍ಲೆಸ್ ಆಪರೇಟರ್ ತೊಡೆಗೆ ಗುಂಡೇಟು ಬಿದ್ದಿದೆ. ಅಲ್ಲದೇ ಇನ್ನೂ ಇಬ್ಬರಿಗೆ ಗಾಯಗಳಾಗಿವೆ.

ಉಗ್ರರು ದಾಳಿ ನಡೆಸಿದ ಪ್ರದೇಶವು ಜನ ಮತ್ತು ವಾಹನ ಸಂದಣಿ ಇದ್ದ ಕಾರಣ ಪ್ರತಿದಾಳಿ ನಡೆಸಲು ಯೋಧರಿಗೆ ಸಾಧ್ಯವಾಗಲಿಲ್ಲ. ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದಂತೆ ಎಚ್ಚೆತ ಭಯೋತ್ಪಾದಕರು ಬೈಕಿನಲ್ಲಿ ಪರಾರಿಯಾದರು ಎಂದು ಸಿಆರ್‍ಪಿಎಫ್ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ್ ಯಾದವ್ ತಿಳಿಸಿದ್ದಾರೆ.

ಆ ಪ್ರದೇಶದಲ್ಲಿ ಹೆಚ್ಚು ಜನರಿದ್ದ ಕಾರಣ ಉಗ್ರರೊಂದಿಗೆ ಗುಂಡಿನ ಚಕಮಕಿ ನಡೆದಿದ್ದರೆ ಸಾರ್ವಜನಿಕರು ಸಾವು-ನೋವುಗಳಿಗೆ ತುತ್ತಾಗುವ ಸಾಧ್ಯತೆ ಇತ್ತು. ಹೀಗಾಗಿ ಅವರ ಮೇಲೆ ಪ್ರತಿದಾಳಿ ನಡೆಸಲು ಹಿಂದೇಟು ಹಾಕಿದ್ದಾಗಿ ಅವರು ಹೇಳಿದ್ದಾರೆ. ಹೆದ್ದಾರಿಯಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದ ಸಿಆರ್‍ಪಿಎಫ್ ಮತ್ತು ಜೆಕೆ ಪೊಲೀಸರು ಕರ್ತವ್ಯ ನಿರ್ವಹಿಸಿ ಶಿಬಿರಕ್ಕೆ ಹಿಂದಿರುಗುತ್ತಿದ್ದಾಗ ನಿನ್ನೆ ರಾತ್ರಿ 8.45ರ ಸಮಯದಲ್ಲಿ ಬೈಕ್‍ನಲ್ಲಿ ಬಂದ ಇಬ್ಬರು ಉಗ್ರರು ವಿಧ್ವಂಸಕ ಕೃತ್ಯ ಎಸಗಲು ಯತ್ನಿಸಿದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin