ಜಿಎಸ್‍ಟಿ ಎಫೆಕ್ಟ್ : ಡಯಾಲಿಸಿಸ್, ಇತರ ವೈದ್ಯಕೀಯ ಸೇವೆಗಳು ದುಬಾರಿ

GST--0124

ನವದೆಹಲಿ, ಆ.6-ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಸರಕು ಮತ್ತು ಸೇವೆಗಳ ತೆರಿಗೆ(ಜಿಎಸ್‍ಟಿ) ಪದ್ದತಿ ಅಡಿ ಡಯಾಲಿಸ್ ಹಾಗೂ ಇತರ ಆರೋಗ್ಯ ಸೇವೆಗಳ ವೆಚ್ಚ ಮತ್ತಷ್ಟು ಹೆಚ್ಚಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.  ಜಿಎಸ್‍ಟಿ ತೆರಿಗೆಯಿಂದಾಗಿ ಡಯಾಲಿಸಿಸ್, ಪೇಸ್‍ಮೇಕರ್ ಜೋಡಣೆ, ಕೀಲು ಮತ್ತು ಮೂಳೆಗಳ ಹಾಗೂ ಕ್ಯಾನ್ಸರ್ ಇತ್ಯಾದಿ ಚಿಕಿತ್ಸೆಗೆ ಅಗತ್ಯವಾದ ಸಾಧನಗಳು ಹಾಗೂ ಕೆಲವು ಆರೋಗ್ಯ ಸೇವೆಗಳ ವೆಚ್ಚ ಹೆಚ್ಚಾಗಲಿದೆ ಎಂದು ಸಚಿವಾಲಯದ ಜಿಎಸ್‍ಟಿ ಕೋಶವು ತನ್ನ ವೆಬ್‍ಸೈಟ್‍ನಲ್ಲಿ ತಿಳಿಸಿದೆ.

ಆರೋಗ್ಯ ಕ್ಷೇತ್ರದ ಮೇಲೆ ಜಿಎಸ್‍ಟಿ ಮತ್ತು ಅದರ ಪರಿಣಾಮಗಳ ಕುರಿತು ಅಗಾಗ ಕೇಳಲ್ಪಡುವ ಪ್ರಶ್ನೆಯೊಂದಕ್ಕೆ ಉತ್ತರವಾಗಿ ಸಚಿವಾಲಯ ಈ ಮಾಹಿತಿ ನೀಡಿದೆ. ಆದರೆ, ಜೀವ ರಕ್ಷಕ ಔಷಧಿಗಳು, ಆರೋಗ್ಯ ಆರೈಕೆ ಸೇವೆಗಳು ಮತ್ತು ವೈದ್ಯಕೀಯ ಸಾಧನಗಳು ಜಿಎಸ್‍ಟಿ ಅಡಿ ತೆರಿಗೆ ರಹಿತವಾಗಿ ಲಭಿಸಲಿದೆ ಎಂದು ಮತ್ತೊಂದು ಪ್ರಶ್ನೆಗೆ ಉತ್ತರಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin