ನಾಳೆ ಸಂಭವಿಸುವ ಖಗ್ರಾಸ ಚಂದ್ರಗ್ರಹಣದ ವೇಳೆ ಈ ಮಂತ್ರ ಪಠಿಸಿದರೆ ಒಳಿತಾಗುತ್ತೆ..!

ಈ ಸುದ್ದಿಯನ್ನು ಶೇರ್ ಮಾಡಿ

Chandragahana--1

ಸೋಮವಾರ ಶ್ರಾವಣ ಶುಕ್ಲ ಪೂರ್ಣಿಮೆ ದಿನ ಚಂದ್ರಗ್ರಹಣ. ಗ್ರಹಣ ಕಾಣಿಸುವುದರಿಂದ ಆಚರಣೆ ಇದೆ. ಪ್ರಾರಂಭ 10.52 ರಾತ್ರಿ, ಅಂತ್ಯ ರಾತ್ರಿ 12 ಗಂಟೆ 45 ನಿಮಿಷ. ಗ್ರಹಣವು ರಾತ್ರಿ ಮೇಷ ಲಗ್ನದಲ್ಲಿ ಸಂಭವಿಸಿ ವೃಷಭ ಲಗ್ನದಲ್ಲಿ ಅಂತ್ಯಗೊಳ್ಳುವ ಈ ಗ್ರಹಣವನ್ನು ಚೂಡಾಮಣಿ ಕೇತುಗ್ರಸ್ತ ಪಾಶ್ರ್ವ ಚಂದ್ರ ಗ್ರಹಣವೆನ್ನುತ್ತಾರೆ. ಕುಂಭ ಲಗ್ನದಲ್ಲಿ ಚಂದ್ರನು ಕೇತುವು ಇರುತ್ತಾರೆ. ಶ್ರವಣ ನಕ್ಷತ್ರ, ಮಕರ ರಾಶಿ, ಕುಂಭ ರಾಶಿಯವರು ಶಾಂತಿ ಮಂತ್ರ ಜಪಿಸಬೇಕು.
8.8.2017ರ ಸೂರ್ಯೋದಯ ನಂತರ, ತಲೆಗೆ ಸ್ನಾನ ಮಾಡಿ ದೇವರಿಗೆ ತುಪ್ಪ ದೀಪ ಹಚ್ಚಿ ನಮಸ್ಕಾರ ಮಾಡಬೇಕು. ಈ ಕೆಳಗಿನ ಶ್ಲೋಕ ಪಠಿಸಿ ಅಕ್ಕಿ, ದಕ್ಷಿಣೆ ದಾನ ಮಾಡಬೇಕು.

ಯೋ ಸೌ ವಜ್ರಧರೋ ದೇವಃ ಆದಿತ್ಯಾನಾಂ ಪ್ರಭುಮತಃ|
ಚಂದ್ರಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು||
ಯೋ ಸೌ ದಂಡಧರೋ ದೇವಃ ಯಮೋ ಮಹಿಷವಾಹನಃ |
ಚಂದ್ರ ಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು||
ಯೋ ಸೌ ಶೂಲಧರೋ ದೇವಃ ಪಿನಾಕೀ ವೃಷವಾಹನಃ |
ಚಂದ್ರ ಗ್ರಹೋಪರಾಗತ್ಥ ಗ್ರಹಪೀಡಾಂ ವ್ಯಪೋಹತು||

– ಡಾ.ವಿಶ್ವಪತಿಶಾಸ್ತ್ರಿ
ಜ್ಯೋತಿಷ್ಯವಾಣಿ ಪಂಚಾಂಗ ಕರ್ತ, 9448018711

ಬರಿಗಣ್ಣಿನಿಂದಲೇ ನೋಡಬಹುದು. :

ಆ.7ರ ರಾತ್ರಿ ಭಾಗಶಃ ಚಂದ್ರಗ್ರಹಣ ಸಂಭವಿಸಲಿದೆ. ಭಾರತಾದ್ಯಂತ ಇದು ಗೋಚರಿಸಲಿದೆ ಎಂದು ಎಂ. ಪಿ. ಬಿರ್ಲಾ ತಾರಾಲಯದ ಸಂಶೋಧನೆ ಮತ್ತು ಶಿಕ್ಷಣದ ನಿರ್ದೇಶಕರಾದ ದೇವಿಪ್ರಸಾದ್‌ ದುರಾಯ್‌ ತಿಳಿಸಿದ್ದಾರೆ. ರಾತ್ರಿ 10.52ಕ್ಕೆ ಚಂದ್ರಗ್ರಹಣ ಆರಂಭವಾಗಿ ರಾತ್ರಿ 12.48ಕ್ಕೆ ಕೊನೆಗೊಳ್ಳಲಿದೆ. ಈ ಖಗೋಳ ವಿಸ್ಮಯವು ಸಂಪೂರ್ಣ ಏಷ್ಯಾ, ಆಸ್ಟ್ರೇಲಿಯಾ, ಯುರೋಪ್‌ ಮತ್ತು ಆಫ್ರಿಕಾದ ಬಹುತೇಕ ಭಾಗಗಳಲ್ಲಿ ಗೋಚರಿಸಲಿದೆ. ಈ ಗ್ರಹಣವನ್ನು ಬರಿಗಣ್ಣಿನಿಂದಲೇ ನೋಡಬಹುದು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin