ನಿಯೋಜಿತ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಪರ ಜಗ್ಗೇಶ್ ‘ವಿವಾದಾತ್ಮಕ ಟ್ವೀಟ್’

ಈ ಸುದ್ದಿಯನ್ನು ಶೇರ್ ಮಾಡಿ

Jaggesh--01

ಬೆಂಗಳೂರು, ಆ.6-ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿರುವ ವೆಂಕಯ್ಯ ನಾಯ್ಡು ಪರ ನಟ ಜಗ್ಗೇಶ್ ಮಾಡಿರುವ ಟ್ವೀಟ್ ಈಗ ತೀವ್ರ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ನಟ ಜಗ್ಗೇಶ್ ಅವರು ತಮ್ಮ ಟ್ವೀಟ್‍ನಲ್ಲಿ ಭಾಷಾ ತಾರತಮ್ಯದ ಹಿನ್ನೆಲೆಯಲ್ಲಿ ವೆಂಕಯ್ಯ ನಾಯ್ಡು ಅವರನ್ನು ಕರ್ನಾಟಕದಿಂದ ರಾಜ್ಯಸಭೆಗೆ ಕಳುಹಿಸಲು ವಿರೋಧಿಸಲಾಗಿತ್ತು. ಆದರೆ ಇಂದು ಅವರು ಭಾರತದ ಉಪರಾಷ್ಟ್ರಪತಿಯಾಗಿದ್ದಾರೆ. ಬಾರದು ಬಪ್ಪುದು , ಬಪ್ಪುದು ತಪ್ಪದು. ಇದೇ ದೇವರ ಲೀಲೆ ಎಂದು ಟ್ವೀಟ್‍ನಲ್ಲಿ ಹೇಳಿದ್ದಾರೆ.

Jaggesh

ಆದರೆ ಜಗ್ಗೇಶ್ ಅವರ ಈ ಟ್ವೀಟ್‍ಗೆ ಕನ್ನಡಪರ ಸಂಘಟನೆಗಳು ಸೇರಿದಂತೆ ವಿವಿಧ ಸಂಘಸಂಸ್ಥೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ ಜಗ್ಗೇಶ್ ತಮ್ಮ ವಿವಾದಿತ ಟ್ವೀಟ್‍ನ್ನು ಡಿಲಿಟ್ ಮಾಡಿದ್ದಾರೆ. ಜಗ್ಗೇಶ್ ವಿರುದ್ಧ ಈ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ.

Facebook Comments

Sri Raghav

Admin