ಬಿಜೆಪಿಯಲ್ಲಿ ಮತ್ತೆ ಭಿನ್ನಮತದ ಹೊಗೆ, ಕಾರ್ಯಕಾರಣಿಗೆ ಕೈಕೊಟ್ಟ ಈಶ್ವರಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

eshwarappa

ಬೆಂಗಳೂರು, ಆ.6- ಮುಂದಿನ ಸಾರ್ವತ್ರಿಕ ಚುನಾವಣೆಗೆ ಸಜ್ಜಾಗುತ್ತಿರುವ ಬಿಜೆಪಿಯಲ್ಲಿ ಮತ್ತೆ ಭಿನ್ನಮತದ ಹೊಗೆ ಕಾಣಿಸಿಕೊಂಡಿದ್ದು, ಇಂದು ನಡೆದ ಮಹತ್ವದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ವಿಪಕ್ಷ ನಾಯಕ ಈಶ್ವರಪ್ಪ ಗೈರು ಎದ್ದು ಕಾಣುತ್ತಿತ್ತು.  ನಿನ್ನೆ ನಡೆದ ಕಾರ್ಯಕಾರಿಣಿ ಸಭೆಯ ಮೊದಲ ದಿನ ಹಲವಾರು ಪದಾಧಿಕಾರಿಗಳು ಬಿಎಸ್‍ವೈ ಮತ್ತು ಈಶ್ವರಪ್ಪ ನಡುವಿನ ವೈಮನಸ್ಸು ಪಕ್ಷದ ವರ್ಚಸ್ಸಿಗೆ ಧಕ್ಕೆಯುಂಟಾಗುತ್ತಿದೆ ಎಂದು ಬಹಿರಂಗವಾಗಿಯೇ ಹೇಳಿದರು.
ಕಳೆದ ರಾತ್ರಿ ಕೆಲ ನಾಯಕರು ಈಶ್ವರಪ್ಪ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ ಎಂದು ಹೇಳಲಾಗಿದ್ದು, ಅವರ ಮನವೊಲಿಸುವ ಪ್ರಯತ್ನ ಮಧ್ಯಾಹ್ನದವರೆಗೂ ನಡೆದಿತ್ತು.

ಆದರೆ, ಇಂದಿನ ಸಭೆಗೆ ಅವರು ಬಾರದೆ ಇರುವುದರ ಬಗ್ಗೆ ಪದಾಧಿಕಾರಿಗಳಲ್ಲಿ ಗೊಂದಲ ಮೂಡಿಸಿತ್ತು ಮತ್ತು ಪರಸ್ಪರ ಮಾತುಕತೆ ನಡೆಸುತ್ತಿದ್ದುದು ಕೂಡ ಕಂಡುಬಂತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin