ಮದ್ದೂರು ಬಳಿ ಭೀಕರ ರಸ್ತೆ ಅಪಘಾತ, ಮೂವರ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Maddur-Accidnet

ಮದ್ದೂರು,ಆ.6-ಪಟ್ಟಣದ ಸಮೀಪ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕೊಲ್ಲಿ ವೃತ್ತದಲ್ಲಿ ಇಂದು ಬೆಳಗಿನ ಜಾವ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಮೂವರು ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತರನ್ನು ಕಾರಿನಲ್ಲಿದ್ದ ಫಾರೂಖ್(39), ಶಕೀಲ್ ಅಹಮದ್(38) ಹಾಗೂ ಮಿನಿ ಟೆಂಪೋದಲ್ಲಿದ್ದ ಸಾಗರ್(20) ಎಂದು ಗುರುತಿಸಲಾಗಿದೆ. ಇತರ ಮೂವರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಮಂಡ್ಯ ನಗರದ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಫಾರೂಖ್ ಮತ್ತು ಶಕೀಲ್ ಮೈಸೂರಿನ ಉದಯಗಿರಿ ಮತ್ತು ರಾಜುನಗರ ನಿವಾಸಿಗಳಾಗಿದ್ದು , ಇವರು ಮೈಸೂರಿನಿಂದ ಬೆಂಗಳೂರಿಗೆ ಜಿಮ್‍ಗೆ ತೆರಳುತ್ತಿದ್ದರು. ಟಾಟಾ ಏಸ್‍ನಲ್ಲಿದ್ದ ಸಾಗರ್ ಮಂಡ್ಯ ಜಿಲ್ಲೆ ಹಾಲ್ಕೆರೆ ನಿವಾಸಿ.ಕಾರು ಕೊಲ್ಲಿ ವೃತ್ತದಲ್ಲಿ ಬಳಿ ಬಂದಾಗ ಡಿವೈಡರ್‍ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಸ್ಯಾಂಟ್ರೋ ಕಾರೊಂದಕ್ಕೆ ಡಿಕ್ಕಿ ಹೊಡೆದಿದೆ. ನಂತರ ಪಲ್ಟಿಯಾಗಿದ್ದ ಕಾರಿಗೆ ಮಿನಿ ಟೆಂಪೋ ಅಪ್ಪಳಿಸಿದೆ.

ಈ ಸಂದರ್ಭ ಕಾರಿನಲ್ಲಿದ್ದ ಶಕೀಲ್ ಅಹಮದ್ ಮತ್ತು ಫಾರೂಖ್ ಸ್ಥಳದಲ್ಲೇ ಸಾವನ್ನಪ್ಪಿದರೆ ಸಾಗರ್ ಮಂಡ್ಯದ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆ ಉಸಿರೆಳೆದಿದ್ದಾನೆ.  ಸ್ಥಳಕ್ಕೆ ಮಂಡ್ಯ ಜಿಲ್ಲೆ ಡಿವೈಎಸ್ಪಿ ಚಂದ್ರಶೇಖರ್, ಸಿಪಿಐ ಪ್ರಭಾಕರ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮದ್ದೂರು ಸಂಚಾರಿ ಪೊಲೀಸ್ ವಿಭಾಗದ ಪಿಎಸ್‍ಐ ಸಂತೋಷ್‍ಕುಮಾರ್ ಮುಖ್ಯಪೇದೆ ಚಿಕ್ಕಳ್ಳಿ ಅವರು ಸ್ಥಳಕ್ಕೆ ಧಾವಿಸಿ ಹೆದ್ದಾರಿ ಗಸ್ತು ಪಡೆ ನೆರವಿನಿಂದ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿ ಕಾರಿನಲ್ಲಿದ್ದ ಮೃತ ಶರೀರಗಳನ್ನು ಹೊರಕ್ಕೆ ತೆಗೆದಿದ್ದಾರೆ. ಈ ಅಪಘಾತದಿಂದಾಗಿ ಸುಮಾರು ಒಂದು ಗಂಟೆ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತವಾಗಿತ್ತು. ಸಂಚಾರಿ ಪೊಲೀಸರು ವಾಹನಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin