ಮಾಧ್ಯಮಕ್ಕೆ ಯಾರನ್ನೂ ಟೀಕಿಸುವ ವಿಶೇಷ ಅಧಿಕಾರ ಇಲ್ಲ : ಕೋರ್ಟ್

Press--01

ನವದೆಹಲಿ, ಆ.6-ಯಾರನ್ನೂ ಬೇಕಾದರೂ ಟೀಕಿಸುವ ವಿಶೇಷ ಹಕ್ಕು ಮಾಧ್ಯಮಕ್ಕೆ ಇಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ. ಪೌರರ ಗೌರವಕ್ಕೆ ಕುಂದುಂಟು ಮಾಡುವ ಹೇಳಿಕೆಗಳು, ಟೀಕೆ-ಟಿಪ್ಪಣಿಗಳು ಅಥವಾ ಆರೋಪಗಳನ್ನು ಮಾಡುವ ಯಾವುದೇ ವಿಶೇಷ ಹಕ್ಕು ಅಥವಾ ವಿಶೇಷ ಅಧಿಕಾರವನ್ನು ಮಾಧ್ಯಮ ಹೊಂದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.  ಮೇಲಾಗಿ, ಇತರರಿಗಿಂತ ಹೆಚ್ಚಿನ ಸ್ವಾತಂತ್ರ್ಯವನ್ನೂ ಪತ್ರಕರ್ತರು ಹೊಂದಿಲ್ಲ. ಅಲ್ಲದೇ ಜನರಿಗೆ ಮಾಹಿತಿ ನೀಡುವ ಅವಕಾಶ ಇರುವುದರಿಂದ ಅವರ ಹೊಣೆಗಾರಿಕೆ ಮತ್ತು ಜವಾಬ್ದಾರಿಯೂ ಹೆಚ್ಚಾಗಿರುತ್ತದೆ ಎಂದೂ ಸಹ ಹೈಕೋರ್ಟ್ ತಿಳಿಸಿದೆ.

ಮಾನಹಾನಿ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನಡೆದ ವಿಚಾರಣೆಯಲ್ಲಿ, ವ್ಯಕ್ತಿಯನ್ನು ತೇಜೋವಧೆ ಮಾಡುವಂತೆ ಯಾವುದೇ ಲೇಖನಗಳನ್ನು ಪ್ರಕಟಿಸದಂತೆ ನಿಯತಕಾಲಿಕವೊಂದರ ವ್ಯವಸ್ಥಾಪಕ ಸಂಪಾದಕನಿಗೆ ನಿರ್ಬಂಧ ವಿಧಿಸಿ ಕೋರ್ಟ್ ಈ ಹೇಳಿಕೆ ನೀಡಿದೆ. ಮಾನನಷ್ಟ ಪರಿಹಾರವಾಗಿ ನೊಂದ ವ್ಯಕ್ತಿಗೆ 39,000 ರೂ.ಗಳ ಜುಲ್ಮಾನೆ ದಂಡವನ್ನೂ ಸಹ ಕಟ್ಟಿಕೊಡುವಂತೆಸಂಪಾದಕನಿಗೆ ಕೋರ್ಟ್ ಆದೇಶ ನೀಡಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin