ಮುಂಬೈನಲ್ಲಿ ಛೋಟಾ ಶಕೀಲ್ ಸಹಚರ ವಿನೀಶ್ ಶೆಟ್ಟಿ ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Vinish-Shetty-014

ಮಂಗಳೂರು,ಆ.6-ಕೊಲೆ, ಬೆದರಿಕೆ, ಕೊಲೆ ಯತ್ನ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರಿಗೆ ಬೇಕಾಗಿದ್ದ ಛೋಟಾ ಶಕೀಲ್ ಸಹಚರರ ವಿನೀಶ್ ಶೆಟ್ಟಿಯನ್ನು ಮಂಗಳೂರಿನ ಕೊಣಾಜೆ ಪೊಲೀಸರು ಮುಂಬೈಯಲ್ಲಿ ಬಂಧಿಸಿದ್ದಾರೆ. 2003ರಲ್ಲಿ ನಡೆದ ಮುಡಿಪು ಗ್ರಾಮದ ಜೋಡಿ ಕೊಲೆ ಪ್ರಕರಣದ ಆರೋಪಿಯಾಗಿದ್ದ ವಿನೀಶ್ ಶೆಟ್ಟಿ ತಲೆ ತಪ್ಪಿಸಿಕೊಂಡಿದ್ದ. ಹಲವಾರು ಕ್ರಿಮಿನಲ್ ಪ್ರಕರಣಗಳಲ್ಲಿ ಮಂಗಳೂರು, ದಾವಣಗೆರೆ, ಮುಂಬೈ, ಹೈದರಾಬಾದ್ ಪೊಲೀಸರಿಗೆ ವಿನೀಶ್ ಶೆಟ್ಟಿ ಮೋಸ್ಟ್ ವಾಂಟೆಡ್ ಆಗಿದ್ದ.

ಉಡುಪಿ ತಾಲ್ಲೂಕು ಶಿರ್ವಾ ಗ್ರಾಮದ ನಿವಾಸಿ ವಿನೀಶ್ ಶೆಟ್ಟಿ ವಿರುದ್ಧ ಕೊಲೆ ಮತ್ತು ಕೊಲೆಯತ್ನ ಪ್ರಕರಣಗಳಲ್ಲದೆ ಶಸ್ತ್ರಾಸ್ತ್ರ ಕಾಯ್ದೆ ಉಲ್ಲಂಘನೆ ಪ್ರಕರಣ ಕೂಡ ದಾಖಲಾಗಿತ್ತು. ಮಂಗಳೂರು ಸೇರಿದಂತೆ ವಿವಿಧೆಡೆಗಳಲ್ಲಿ ವಿನೀಶ್ ಶೆಟ್ಟಿ ಅನೇಕ ಪ್ರಕರಣಗಳಲ್ಲಿ ಭಾಗಿಯಾಗಿದ್ದ.  ಮಹಾರಾಷ್ಟ್ರ , ಆಂಧ್ರ, ಕರ್ನಾಟಕ ಹೀಗೆ ಎಲ್ಲ ರಾಜ್ಯಗಳ ಪೊಲೀಸರಿಗೂ ಚಲ್ಲೆ ಹಣ್ಣು ತಿನಿಸಿ ತಪ್ಪಿಸಿಕೊಂಡಿದ್ದ ವಿನೀಶ್ ಶೆಟ್ಟಿ ಕೊನೆಗೂ ನಿನ್ನೆ ಮಧ್ಯರಾತ್ರಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ.
ವಿನೀಶ್ ಶೆಟ್ಟಿ , ಮುಂಬೈನ ನಿರ್ದಿಷ್ಟ ಪ್ರದೇಶವೊಂದರಲ್ಲಿ ಇದ್ದಾನೆ ಎಂಬ ಮಾಹಿತಿ ಆಧರಿಸಿ ಕೊಣಾಜೆ ಪೊಲೀಸರು ಮುಂಬೈಗೆ ತೆರಳಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin