ಮೋದಿ ಭಾರತವನ್ನು ಯುದ್ಧದೆಡೆಗೆ ತಳ್ಳುತ್ತಿದ್ದಾರೆ : ಚೀನಾ ಮಾಧ್ಯಮ ಟೀಕೆ

ಈ ಸುದ್ದಿಯನ್ನು ಶೇರ್ ಮಾಡಿ

Modi UN

ಬೀಜಿಂಗ್, ಆ.6-ಪ್ರಧಾನಮಂತ್ರಿ ನರೇಂದ್ರ ಮೋದಿ ಚೀನಾ ವಿರುದ್ಧ ಕಠಿಣ ಧೋರಣೆ ಅನುಸರಿಸುವ ಮೂಲಕ ಭಾರತವನ್ನು ಯುದ್ಧದೆಡೆಗೆ ಕೊಂಡೊಯ್ಯುತ್ತಿದ್ದಾರೆ ಹಾಗೂ ಭಾರತೀಯರ ವಿಧಿಯೊಂದಿಗೆ ಜೂಜಾಡುತ್ತಿದ್ದಾರೆ ಎಂದು ಚೀನಿ ಮಾಧ್ಯಮಗಳು ಕಟುವಾಗಿ ಟೀಕಿಸಿವೆ.  ಈಶಾನ್ಯ ರಾಜ್ಯ ಸಿಕ್ಕಿಂ ವಲಯದ ಡೋಕ್ಲಾಮ್ (ಡೋಕಾ ಲಾ) ಬಿಕ್ಕಟ್ಟು ದಿನೇ ದಿನೇ ಬಿಗಡಾಯಿಸುತ್ತಿರುವ ಬಗ್ಗೆ ಚೀನಾದ ಸರ್ಕಾರಿ ಸ್ವಾಮ್ಯದ ದಿನಪತ್ರಿಕೆ ಗ್ಲೋಬಲ್ ಟೈಮ್ಸ್ ನ ಸಂಪಾದಕೀಯದಲ್ಲಿ ಗಮನಸೆಳೆದಿದೆ.

ಡೋಕಾ ಲಾದಲ್ಲಿ ಜಮಾವಣೆಗೊಂಡಿರುವ ಭಾರತೀಯ ಯೋಧರ ಹುಟ್ಟಡಗಿಸುವ ಸಾಮರ್ಥ್ಯ ಹೊಂದಿರುವ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್‍ಎ) ಶಕ್ತಿಯನ್ನು ಮೋದಿ ಅರಿತುಕೊಳ್ಳಬೇಕೆಂದು ಪತ್ರಿಕೆ ಹೇಳಿದೆ. ಈ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಚೀನಾ ಸರ್ಕಾರ ಮತ್ತು ಅದರ ಅಧೀನದಲ್ಲಿರುವ ಮಾಧ್ಯಮಗಳು ಕಳೆದ ಕೆಲವು ದಿನಗಳಿಂದ ಭಾರತದ ವಿರುದ್ಧ ಕಟುವಾದ ಟೀಕೆಗಳನ್ನು ಮಾಡುತ್ತಿವೆ. ತನ್ನ ಸಹನೆಯನ್ನು ಪರೀಕ್ಷಿಸಬಾರದು ಎಂದು ಚೀನಾ ರಕ್ಷಣಾ ಸಚಿವಾಲಯ ಶುಕ್ರವಾರ ಭಾರತಕ್ಕೆ ಮತ್ತೆ ಎಚ್ಚರಿಕೆ ನೀಡಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin