ಸಿರಿಯಾ ಮೇಲೆ ಅಮೆರಿಕ ನಡೆಸಿದ ವಾಯುದಾಳಿಯಲ್ಲಿ 43 ನಾಗರಿಕರ ಸಾವು

America-Airstrike--0000011

ಡಮಾಸ್ಕಸ್, ಆ.6-ಸಿರಿಯಾದ ರಖ್ಖಾದಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರನ್ನು ಗುರಿಯಾಗಿರಿಸಿಕೊಂಡು ಶನಿವಾರ ಅಮೆರಿಕ ನೇತೃತ್ವದ ಸೇನಾಪಡೆಗಳು ನಡೆಸಿದ ವಾಯುದಾಳಿಯಲ್ಲಿ ಕನಿಷ್ಠ 43 ನಾಗರಿಕರು ಬಲಿಯಾಗಿದ್ಧಾರೆ.  ರಖ್ಖಾ ಪಟ್ಟಣದ ಉತ್ತರ ಭಾಗದ ಮೇಲೆ ನಡೆದ ಈ ದಾಳಿಯಲ್ಲಿ 65ಕ್ಕೂ ಹೆಚ್ಚು ಸರ್ಕಾರಿ ಕಚೇರಿಗಳು ಮತ್ತು ಕಟ್ಟಡಗಳು ನಾಶವಾಗಿವೆ. ಅಲ್ಲದೇ ಸಕ್ಕರೆ ಕಾರ್ಖಾನೆಯೊಂದು ಸಹ ಧ್ವಂಸಗೊಂಡಿದೆ ಎಂದು ಸಾನಾ ವಾರ್ತಾ ಸಂಸ್ಥೆ ವರದಿ ಮಾಡಿದೆ.

ಈ ಪಟ್ಟಣದ ವಸತಿ ಪ್ರದೇಶದ ಮೇಲೆ ಅಮೆರಿಕ ಮತ್ತು ಮಿತ್ರಪಡೆಗಳ ಸಮರ ವಿಮಾನಗಳು ಹಲವು ಬಾರಿ ವಾಯು ದಾಳಿ ನಡೆಸಿದ ಪರಿಣಾಮ 40ಕ್ಕೂ ಹೆಚ್ಚು ನಾಗರಿಕರು ಮೃತಪಟ್ಟರು ಎಂದು ಸಾನಾ ಹೇಳಿದೆ. ಶುಕ್ರವಾರವಷ್ಟೇ ಇದೇ ರಖ್ಖಾ ಪಟ್ಟಣದ ಮೇಲೆ ನಡೆದ ದಾಳಿಯಲ್ಲಿ ಏಳು ಮಕ್ಕಳು ಮೃತಪಟ್ಟಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin