2ನೇ ಟೆಸ್ಟ್’ನಲ್ಲಿ ಕೊಹ್ಲಿ ಪಡೆಗೆ ಭರ್ಜರಿ ಜಯ, ಸರಣಿಗೆದ್ದ ಭಾರತ

ಈ ಸುದ್ದಿಯನ್ನು ಶೇರ್ ಮಾಡಿ

Kohlin01

ಕೊಲಂಬೊ,ಆ.6-ಇಲ್ಲಿನ ಸಂಹಳೀಯರ ಕ್ರೀಡಾಂಗಣದಲ್ಲಿ ಮುಕ್ತಾಯವಾದ ದ್ವಿತೀಯ ಟೆಸ್ಟ್‍ನಲ್ಲಿ ಭಾರತ, ಶ್ರೀಲಂಕಾ ವಿರುದ್ಧ ಇನಿಂಗ್ಸ್ ಹಾಗೂ 53 ರನ್‍ಗಳ ಭರ್ಜರಿ ಗಲುವು ಸಾಧಿಸಿದೆ. ಇದರೊಂದಿಗೆ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕೊಹ್ಲಿ ಪಡೆ 2-0ಯಿಂದ ಪ್ರಶಸ್ತಿ ಮುಡಿಗೇರಿಸಿಕೊಂಡಿತು.
ಬ್ಯಾಟಿಂಗ್ ಹಾಗೂ ಬೌಲಿಂಗ್‍ನ ಸಂಘಟಿತ ಪ್ರದರ್ಶನನಿಂದ ಭಾರತ ಒಂದು ಟೆಸ್ಟ್ ಬಾಕಿ ಇರುವಾಗಲೇ ಸರಣಿ ಗೆದ್ದಿದೆ. ಮೊದಲ ಗಾಲೆ ಟೆಸ್ಟ್‍ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನನಿಂದ ಶುಭಾರಂಭ ಮಾಡಿದ ಕೊಹ್ಲಿ ಪಡೆ 2ನೇ ಟೆಸ್ಟ್ ನಲ್ಲಿ ಅದೇ ಭರ್ಜರಿ ಪ್ರದರ್ಶನ ಮೂಲಕ ಲಂಕಾ ತಡೆವನ್ನು ಸದೆಬಡಿಯಿತು.

ಮೊದಲ ಇನಿಂಗ್ಸ್ ನಲ್ಲಿ ಭರ್ಜರಿ ಬ್ಯಾಟಿಂಗ್‍ನಿಂದ ಭಾರತ 9 ವಿಕೆಟ್ ನಷ್ಟಕ್ಕೆ 622 ರನ್ ಕಲೆ ಹಾಕಿ ಡಿಕ್ಲೀರ್ ಮಾಡಿಕೊಂಡಿತು. ಬೃಹತ್ ಇನಿಂಗ್ಸ್ ಬೆನ್ನಟ್ಟಿದ ಲಂಕಾ ಆರ್.ಅಶ್ವಿನ್ ಬಿಗುವಿನ ಬೌಲಿಂಗ್ ದಾಳಿಗೆ ತತ್ತರಿಸಿ 183 ರನ್‍ಗಳಿಗೆ ಆಲೌಟ್ ಆಗಿ ಫಾಲೋ ಆನ್ ಭೀತಿ ಎದುರಿಸಿತ್ತು.
ಬಳಿಕ ದ್ವಿತೀಯ ಇನಿಂಗ್ಸ್ ಆರಂಭಿಸಿದ ಲಂಕಾ ಆರಂಭದಲ್ಲೇ ದಿಟ್ಟ ಹೋರಾಟ ನೀಡುವ ಮುನ್ಸೂಚನೆ ನೀಡಿದ್ದರೂ ಸೊಲೋಪ್ಪಿಕೊಂಡಿತು. ಆರಂಭಿಕ ಆಟಗಾರ ಕರುಣರತ್ನೆ (141) ಹಾಗೂ ಕುಶಲ್ ಮೆಂಡಿಸ್ (110) ಅವಳಿ ಶತಕ ಬಾರಿಸಿ ಬಿಟ್ಟರೆ ಉಳಿದ ಬ್ಯಾಟ್ಸ್‍ಮನ್‍ಗಳ ವೈಫಲ್ಯ ಅನುಭವಿಸಿದರು. ರವೀಂದ್ರ ಜಡೇಜಾ ಅವರ ಸ್ಪಿನ್ ಜಾಲಕ್ಕೆ ಬಿದ್ದು ಲಂಕಾ ಬ್ಯಾಟ್ಸ್ ಗಳು ನಿನ್ನೆ ಮೊತ್ತಕ್ಕೆ 187 ರನ್ ಅಂತರದಲ್ಲಿ 8 ವಿಕೆಟ್ ಕಳೆದುಕೊಂಡು ಸೋಲಿಗೆ ಶರಣಾಯಿತು.

ಭಾರತ ಪರ ಜಡೇಜಾ 5, ಅಶ್ವಿನ್ ಹಾಗೂ ಪಾಂಡ್ಯೆ ತಲಾ 2 ವಿಕೆಟ್ ಉರುಳಿಸಿದರೆ ಉಮೇಶ್ ಯಾದವ್ 1 ವಿಕೆಟ್ ಕಬಳಿಸಿದರು.
ಆಲ್‍ರೌಂಡರ್ ಪ್ರದರ್ಶನ ನೀಡಿದ ಜಡೇಜಾ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದರು. ಮುಂದಿನ ಟೆಸ್ಟ್ ಇದೇ 12 ರಂದು ಪಳ್ಳೆಕೆಲೆ ಅಂತರ್‍ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin