ಅನಧಿಕೃತವಾಗಿ ನೀರಿನ ಸಂಪರ್ಕ ಕಟ್, ಮೈಸೂರಿನ ಜನರಿಗೆ ಬೆಳ್ಳಂಬೆಳಿಗ್ಗೆ ಶಾಕ್

ಈ ಸುದ್ದಿಯನ್ನು ಶೇರ್ ಮಾಡಿ

Mysuru-v-011

ಮೈಸೂರು, ಆ.7- ಇಲ್ಲಿನ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾದ ಕೆಜಿ ಕೊಪ್ಪಲಿನ ಜನತೆಗೆ ಪಾಲಿಕೆ ಬೆಳ್ಳಂ ಬೆಳಗ್ಗೆ ಶಾಕ್ ನೀಡಿದೆ. ಈ ಬಡಾವಣೆಯಲ್ಲಿ ಬಹುತೇಕ ಮಂದಿ ಅನಧಿಕೃತವಾಗಿ ನೀರಿನ ಸಂಪರ್ಕ ಹೊಂದಿರುವುದು ಹಾಗೂ ನೀರಿನ ಬಿಲ್‍ನ್ನು ಪಾವತಿಸದೇ ಇರುವುದರ ಹಿನ್ನೆಲೆಯಲ್ಲಿ ಇಂದು ಬೆಳ್ಳಂ ಬೆಳಗ್ಗೆ ಪಾಲಿಕೆ ಅಧಿಕಾರಿಗಳು ಪೊಲೀಸರೊಂದಿಗೆ ಬಂದು ಅನಧಿಕೃತ ಬಿಲ್ ಪಾವತಿಸದ ನೀರಿನ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ.

ಕೆ.ಜಿ. ಕೊಪ್ಪಲಿನಲ್ಲಿ 350ಕ್ಕೂ ಅಧಿಕ ಮಂದಿ ನೀರಿನ ಬಿಲ್ ಪಾವತಿಸಿಲ್ಲ. ನೂರಾರು ಮಂದಿ ಅನಧಿಕೃತ ನೀರಿನ ಸಂಪರ್ಕ ಪಡೆದುಕೊಂಡಿದ್ದಾರೆ. ಮೊದಲೇ ಇಂತಹ ಮನೆಗಳನ್ನು ಗುರುತಿಸಿಕೊಂಡ ಅಧಿಕಾರಿಗಳು ಇಂದು ಬೆಳ್ಳಂ ಬೆಳಗ್ಗೆ ಸ್ಥಳಕ್ಕೆ ಬಂದು ನೀರಿನ ಸಂಪರ್ಕ ಕಡಿತಗೊಳಿಸುತ್ತಿದ್ದಂತೆಯೇ ಮನೆಯವರು ಅದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ನಡುವೆ ಮಾತಿನ ಚಕಮಕಿ ನಡೆದಿದೆ. ಆದರೂ ಅದಕ್ಕೆ ಜಗ್ಗದ ಅಧಿಕಾರಿಗಳು ಸಕ್ರಮಗೊಳಿಸಿ ಬಿಲ್ ಕಟ್ಟುವಂತೆ ತಾಕೀತು ಮಾಡಿ ಎಚ್ಚರಿಕೆ ನೀಡಿ ತೆರಳುತ್ತಿದ್ದುದು ಕಂಡು ಬಂತು.
ಈ ಸಂದರ್ಭದಲ್ಲಿ ಪಾಲಿಕೆ ಆಯುಕ್ತ ಜಗದೀಶ್ ಮಾತನಾಡಿ, ಮೊದಲು 25,000 ಅನಧಿಕೃತ ನೀರಿನ ಸಂಪರ್ಕಗಳಿರುವುದು ಗೊತ್ತಾಗಿದೆ. ನಂತರ ಸಾರ್ವಜನಿಕರಲ್ಲಿ ಇದರ ಬಗ್ಗೆ ಅರಿವು ಮೂಡಿಸಿ ಪಾಲಿಕೆಗೆ ಬಂದು ಸಂಪರ್ಕವನ್ನು ಸಕ್ರಮಗೊಳಿಸಿಕೊಳ್ಳಲು ತಿಳಿಸಿದ್ದೆವು. ಅದರಂತೆ ಹಲವಾರು ಮಂದಿ ಶುಲ್ಕ ಕಟ್ಟಿದ್ದಾರೆ. ಇನ್ನು ಉಳಿದಂತೆ 17,000 ನೀರಿನ ಸಂಪರ್ಕವನ್ನು ಕಡಿತಗೊಳಿಸುವ ಕಾರ್ಯ ಆರಂಭವಾಗಿದೆ ಎಂದು ತಿಳಿಸಿದರು.   ಕೆ.ಜಿ. ಕೊಪ್ಪಲು ಸೇರಿದಂತೆ ನಗರದ ವಿವಿಧ ಭಾಗದಲ್ಲಿ ಅನಧಿಕೃತ ಕುಡಿಯುವ ನೀರಿನ ಸಂಪರ್ಕ ಇದೆ. ಅದನ್ನು ಸಹ ಬಂದ್ ಮಾಡಲಾಗುವುದು. ಹಣ ಬಾಕಿ ಉಳಿಸಿಕೊಂಡವರ ಸಂಪರ್ಕವನ್ನು ಕಡಿತಗೊಳಿಸಲಾಗುವುದು.

ಇದೇ ಸಂದರ್ಭದಲ್ಲಿ ಕೆ.ಜಿ. ಕೊಪ್ಪಲಿನ ನಿವಾಸಿಗಳು ಮಾತನಾಡಿ, ನಮಗೆ ಅಧಿಕಾರಿಗಳು ಯಾವುದೇ ರೀತಿಯ ಮಾಹಿತಿಯನ್ನು ನೀಡಿಲ್ಲ. ನಮ್ಮದು ಅನಧಿಕೃತ ಸಂಪರ್ಕ ಎಂದೂ ಸಹ ನಮಗೆ ತಿಳಿಸಿಲ್ಲ. ನಮಗೆ ಹಣ ಕಟ್ಟುವಂತೆ ಬಿಲ್ ಕೂಡ ನೀಡಿಲ್ಲ ಎಂದು ತಿಳಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin