ಇನ್ನೊಂದು ತಿಂಗಳಲ್ಲಿ ಚೀನಾ-ಭಾರತ ನಡುವೆ ವಾರ್ ಫಿಕ್ಸ್.. ?

ಈ ಸುದ್ದಿಯನ್ನು ಶೇರ್ ಮಾಡಿ

India-Vs-China--01

ನವದೆಹಲಿ,ಆ.7-ಸಿಕ್ಕಿಂ ಸಮೀಪದ ಡೋಕ್ಲಾಮ್ ಸಂಬಂಧ ಭಾರತ ಮತ್ತು ಚೀನಾ ನಡುವೆ ಸೃಷ್ಟಿಯಾಗಿರುವ ಸೇನಾ ಬಿಕ್ಕಟ್ಟು ಮುಂದಿನ ಒಂದು ತಿಂಗಳಲ್ಲಿ ಪೂರ್ಣ ಪ್ರಮಾಣದ ಯುದ್ಧಕ್ಕೆ ಕಾರಣವಾಗಬಲ್ಲದು ಎಂದು ಭಾರತೀಯ ಮೂಲದ ಬ್ರಿಟನ್‍ನ ಆರ್ಥಿಕ ತಜ್ಞ ರಾಜಕಾರಣಿ ಮೇಘ್ನಾದ್ ದೇಸಾಯಿ ಭವಿಷ್ಯ ನುಡಿದಿದ್ದಾರೆ. ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿರುವ ಅವರು, ಡೋಕ್ಲಾಮ್ ಬಿಕ್ಕಟ್ಟು ದಕ್ಷಿಣ ಚೀನಾ ಸಮುದ್ರ ವಿವಾದದಂತಿದೆ. ಒಂದು ವೇಳೆ ಯುದ್ಧ ನಡೆದರೆ, ಬಹುರಂಗಗಳಲ್ಲಿ ಇದು ನಡೆಯಲಿದೆ. ಭಾರತದ ನೆರವಿಗೆ ಅಮೆರಿಕ ಧಾವಿಸಲಿದೆ ಎಂದು ಹೇಳಿದ್ದಾರೆ.

 

ಡೋಕ್ಲಾಮ್ಬಿಕ್ಕಟ್ಟು ಸಂಪೂರ್ಣ ಕೈತಪ್ಪಿ ಯಾವಾಗ ಹಾಗೂ ಎಲ್ಲಿ ಯುದ್ಧ ನಡೆಯುತ್ತದೆ ಎಂಬುದನ್ನು ಹೇಳಲು ನಾನು ಜ್ಯೋತಿಷಿಯಲ್ಲ. ಚೀನಾ ಜೊತೆಗೆ ತಿಂಗಳಲ್ಲಿ ಭಾರತ ಪೂರ್ಣ ಪ್ರಮಾಣದ ಯುದ್ಧಕ್ಕಿಳಿಯಬಹುದು. ಆ ಹಂತದಲ್ಲಿ ಅದನ್ನು ನಿಯಂತ್ರಿಸಲು ಆಗದು.  ಒಂದು ವೇಳೆ ಯುದ್ಧ ನಡೆದರೆ ಅದು ಅಮೆರಿಕ-ಚೀನಾ ಸಮರವಾಗಲಿದ್ದು, ಭಾರತವು ಅಮೆರಿಕ ಜೊತೆ ಇರಲಿದೆ. ಆದರೆ, ಚೀನಾದ ಸೇನಾ ಸಾಮರ್ಥ್ಯವನ್ನು ಭಾರತ ಲಘುವಾಗಿ ಪರಿಗಣಿಸಬಾರದು. ಏಕೆಂದರೆ ಚೀನಾ ಸೇನೆ ಪಾಕಿಸ್ತಾನ ಸೇನೆಯಂತಲ್ಲ ಎಂದು ಬ್ರಿಟನ್‍ನ ರಾಜ್ಯಸಭೆ ಹೌಸ್ ಆಫ್ ಲಾಡ್ರ್ಸ್ ಸದಸ್ಯರೂ ಆಗಿರುವ ಮೇಘ್ನಾದ್ ದೇಸಾಯಿ ಅವರು ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin