ಈ ವರ್ಷದ ಮೊದಲ ಖಂಡಗ್ರಾಸ ಕೇತುಗ್ರಸ್ಥ ಚಂದ್ರಗ್ರಹಣ

 

Moon--01

ಬೆಂಗಳೂರು, ಆ.7- ಶ್ರಾವಣ ಮಾಸದ ಶುಕ್ಲ ಪೌರ್ಣಮಿ ದಿನವಾದ ಇಂದು ಖಂಡಗ್ರಾಸ ಚಂದ್ರಗ್ರಹಣ ಸಂಭವಿಸಲಿದೆ. ರಾತ್ರಿ 10.22ರಿಂದ ಚಂದ್ರ ಗ್ರಹಣ ಆರಂಭವಾಗಲಿದ್ದು, ರಾತ್ರಿ 10.53ಕ್ಕೆ ಗ್ರಹಣ ಸ್ಪರ್ಶವಾಗಲಿದೆ. ಚಂದ್ರ ಗ್ರಹಣ ಹಿನ್ನೆಲೆಯಲ್ಲಿ ನಾಡಿನ ವಿವಿಧ ದೇವಾಲಯಗಳಲ್ಲಿ ಗ್ರಹಣ ವೇಳೆ ಪೂಜೆ ಕೈಂಕರ್ಯಗಳನ್ನು ಸ್ಥಗಿತಗೊಳಿಸಲಾಗಿದೆ. ಮೈಸೂರಿನ ಚಾಮುಂಡೇಶ್ವರಿ ದೇವಾಲಯ, ಉಡುಪಿಯ ಕೃಷ್ಣ ದೇವಾಲಯ ಸೇರಿದಂತೆ ರಾಜ್ಯದ ಅನೇಕ ದೇವಾಲಯಗಳಲ್ಲಿ ಪೂಜೆ ಇರುವುದಿಲ್ಲ.

ಸದಾ ಜನಜಂಗುಳಿಯಿಂದ ತುಂಬಿ ತುಳುಕುವ ತಿರುಮಲ ತಿರುಪತಿಯಲ್ಲಿ ಚಂದ್ರಗ್ರಹಣ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಇಂದಿನಿಂದ ನಾಳೆ ಮುಂಜಾನೆಯವರೆಗೂ ದರ್ಶನ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿದೆ.

ಗ್ರಹಣದ ಹಿನ್ನೆಲೆ ಮೇಲುಕೋಟೆಯ ಚೆಲುವನಾರಾಯಣ ಸ್ವಾಮಿ ದೇವಾಲಯವನ್ನು ಇಂದು ಸಂಜೆ 6 ಗಂಟೆಯ ನಂತರ ಬಂದ್ ಮಾಡಲಾಗುತ್ತಿದೆ. ಅಷ್ಟೇ ಅಲ್ಲದೇ ದೇವಾಲಯದಲ್ಲಿ ಚಂದ್ರಗ್ರಹಣ ಶಾಂತಿ ಹೋಮ ಏರ್ಪಡಿಸಲಾಗಿದೆ. ಜೊತೆಗೆ ಗ್ರಹಣದ ಶಾಂತಿಗಾಗಿ ವಿಶೇಷ ಅಭಿಷೇಕ ಹಾಗೂ ಪೂಜೆ ನಡೆಸಲಾಗುತ್ತಿದೆ.

ಮಂತ್ರಾಲಯದಲ್ಲಿ ಗುರು ರಾಘವೇಂದ್ರ ರಾಯರ 346ನೇ ಆರಾಧನ ಮಹೋತ್ಸವ ನಿನ್ನೆಯಿಂದ ಆರಂಭಗೊಂಡಿದ್ದು, ಸಾವಿರಾರು ಭಕ್ತರು ದೇಗುಲದಲ್ಲಿ ಜಮಾಯಿಸಿದ್ದಾರೆ. ಆದರೆ ಇಂದು ಚಂದ್ರಗ್ರಹಣದ ಹಿನ್ನೆಲೆ ಧಾರ್ಮಿಕ ಕಾರ್ಯಗಳನ್ನು ಮೊಟಕುಗೊಳಿಸಲಾಗಿದೆ.

 

ಬರಿಗಣ್ಣಿನಿಂದಲೇ ನೋಡಬಹುದು. :

ಆ.7ರ ರಾತ್ರಿ ಭಾಗಶಃ ಚಂದ್ರಗ್ರಹಣ ಸಂಭವಿಸಲಿದೆ. ಭಾರತಾದ್ಯಂತ ಇದು ಗೋಚರಿಸಲಿದೆ ಎಂದು ಎಂ. ಪಿ. ಬಿರ್ಲಾ ತಾರಾಲಯದ ಸಂಶೋಧನೆ ಮತ್ತು ಶಿಕ್ಷಣದ ನಿರ್ದೇಶಕರಾದ ದೇವಿಪ್ರಸಾದ್‌ ದುರಾಯ್‌ ತಿಳಿಸಿದ್ದಾರೆ. ರಾತ್ರಿ 10.52ಕ್ಕೆ ಚಂದ್ರಗ್ರಹಣ ಆರಂಭವಾಗಿ ರಾತ್ರಿ 12.48ಕ್ಕೆ ಕೊನೆಗೊಳ್ಳಲಿದೆ. ಈ ಖಗೋಳ ವಿಸ್ಮಯವು ಸಂಪೂರ್ಣ ಏಷ್ಯಾ, ಆಸ್ಟ್ರೇಲಿಯಾ, ಯುರೋಪ್‌ ಮತ್ತು ಆಫ್ರಿಕಾದ ಬಹುತೇಕ ಭಾಗಗಳಲ್ಲಿ ಗೋಚರಿಸಲಿದೆ. ಈ ಗ್ರಹಣವನ್ನು ಬರಿಗಣ್ಣಿನಿಂದಲೇ ನೋಡಬಹುದು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin