ಉಗ್ರ ಅಬ್ದುಲ್ಲಾನ ಬಂಧನದ ಬೆನ್ನಲ್ಲೇ ಮತ್ತೆ 3 ಭಯೋತ್ಪಾದಕರ ಸೆರೆ, ಭಾರೀ ಸ್ಫೋಟಕ ವಶ

ಈ ಸುದ್ದಿಯನ್ನು ಶೇರ್ ಮಾಡಿ

Arrested-Man

ಮುಂಬೈ, ಆ.7-ಉತ್ತರ ಪ್ರದೇಶದಲ್ಲಿ ಬಾಂಗ್ಲಾ ಮೂಲದ ಭಯೋತ್ಪಾದಕ ಅಬ್ದುಲ್ಲಾನನ್ನು ಬಂಧಿಸಿದ ಬೆನ್ನಲ್ಲೇ ಭಯೋತ್ಪಾದನೆ ನಿಗ್ರಹ ದಳ (ಎಟಿಎಸ್) ಅಧಿಕಾರಿಗಳು ಮುಂಬೈನಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಮೂವರು ಶಂಕಿತ ಉಗ್ರರನ್ನು ಬಂಧಿಸಿ, ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಉಗ್ರರ ಬಂಧನದಿಂದ ಮುಂಬೈ ಹಾಗೂ ಮತ್ತಿತರ ಕಡೆ ನಡೆಯಬಹುದಾಗಿ ಭಾರೀ ವಿಧ್ವಂಸಕ ಕೃತ್ಯಗಳು ತಪ್ಪಿದಂತಾಗಿದೆ.

ಖಚಿತ ಸುಳಿವಿನ ಮೇರೆಗೆ ಮಹಾರಾಷ್ಟ್ರದ ಎಟಿಎಸ್ ಅಧಿಕಾರಿಗಳು ಮುಂಬೈನ ಕೆಲವು ಪ್ರದೇಶಗಳ ಮೇಲೆ ದಾಳಿ ನಡೆಸಿ ಮೂವರು ಉಗ್ರರನ್ನು ಬಂಧಿಸಿ 15 ಕೆಜಿ ಅಮೋನಿಯಂ ನೈಟ್ರೇಟ್, 9 ಡಿಟೋನೇಟರ್‍ಗಳು ಹಾಗೂ ಮತ್ತಿತರ ಸ್ಫೋಟಕ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ. ಮುಂಬೈ ಸೇರಿದಂತೆ ಕೆಲವೆಡೆ ಸ್ಫೋಟಕ ನಡೆಸಲು ಸಂಚು ರೂಪಿಸಿದ್ದರೆಂಬುದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ. ಸುರಕ್ಷತೆ ದೃಷ್ಟಿಯಿಂದ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಉನ್ನತಾಧಿಕಾರಿಗಳು ನಿರಾಕರಿಸಿದ್ದಾರೆ. ಉಗ್ರಗಾಮಿಗಳಿಗೆ ನಕಲಿ ಆಧಾರ್ ಕಾರ್ಡ್ ಮತ್ತು ಪಾಸ್ಪೋರ್ಟ್ ಗಳನ್ನು ಮಾಡಿಕೊಡುತ್ತಿದ್ದ ಹಾಗೂ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಕುಮ್ಮಕ್ಕು ನೀಡುತ್ತಿದ್ದ ಬಾಂಗ್ಲಾದೇಶದ ಭಯೋತ್ಪಾದಕನೊಬ್ಬನನ್ನು ಎಟಿಎಸ್ ಅಧಿಕಾರಿಗಳು ಉತ್ತರ ಪ್ರದೇಶದಲ್ಲಿ ಬಂಧಿಸಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin