ಎನ್‍ಕೌಂಟರ್’ನಲ್ಲಿ ಮತ್ತೊಬ್ಬ ಎಲ್‍ಇಟಿ ಭಯೋತ್ಪಾದಕನ ಹತ್ಯೆ

Encounter--01

ಶ್ರೀನಗರ, ಆ.7-ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರು ಮತ್ತು ಯೋಧರ ನಡುವೆ ಗುಂಡಿನ ಚಕಮಕಿ ದಿನನಿತ್ಯದ ಸುದ್ದಿಯಾಗುತ್ತಿದೆ. ಪುಲ್ವಾಮಾ ಜಿಲ್ಲೆಯಲ್ಲಿ ಸೇನಾಪಡೆ ನಡೆಸಿದ ಕಾರ್ಯಾಚರಣೆಯೊಂದರಲ್ಲಿ ಲಷ್ಕರ್-ಎ-ತೈಬಾ (ಎಲ್‍ಇಟಿ) ಉಗ್ರನೊಬ್ಬ ಹತನಾಗಿದ್ದಾರೆ.  ಪುಲ್ವಾಮಾದ ಸಾಮ್‍ಬೂರಾ ಗ್ರಾಮಕ್ಕೆ ಉಗ್ರರು ನುಸುಳಿಸುರವ ಬಗ್ಗೆ ದೊರೆತ ಖಚಿತ ಮಾಹಿತಿಯನ್ನು ಆಧರಿಸಿ ನಿನ್ನೆ ತಡರಾತ್ರಿ ಭದ್ರತಾಪಡೆಗಳು ಆ ಗ್ರಾಮದಲ್ಲಿ ಜಾಲಾಡುತ್ತಿದ್ದರು. ಈ ಸಂದರ್ಭದಲ್ಲಿ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದಾಗ ಎನ್‍ಕೌಂಟರ್ ನಡೆಯಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಗುಂಡಿನ ಕಾಳಗದಲ್ಲಿ ಉಗ್ರಗಾಮಿಯೊಬ್ಬ ಹತನಾದ. ಆತ ಪಾಕಿಸ್ತಾನದ ನಿಷೇಧಿತ ಉಗ್ರಗಾಮಿ ಸಂಘಟನೆ ಲಷ್ಕರ್-ಎ-ತೈಬಾಗೆ ಸೇರಿದವನು ಎಂಬುದು ತಿಳಿದುಬಂದಿದೆ ಎಂದು ಅವರು ಹೇಳಿದ್ದಾರೆ.  ಬಾರಾಮುಲ್ಲಾ ಜಿಲ್ಲೆಯ ಸಪೋರ್ ಪ್ರದೇಶದಲ್ಲಿ ಎಲ್‍ಇಟಿ ಉಗ್ರಗಾಮಿ ಸಂಘಟನೆಯ ಮೂವರು ಉಗ್ರರನ್ನು ಶುಕ್ರವಾರ ಯೋಧರು ಹೊಡೆದುರುಳಿಸಿ, ಭಾರೀ ವಿಧ್ವಂಸಕ ಕೃತ್ಯಕ್ಕೆ ರೂಪಿಸಿದ್ದ ಸಂಚನ್ನು ವಿಫಲಗೊಳಿಸಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin