ಗಾಲಿ ಕುರ್ಚಿಯಲ್ಲಿ 25 ಕೆಜಿ ಚಿನ್ನ ಕಳ್ಳಸಾಗಣೆಗೆ ಯತ್ನಿಸಿದ ಕಳ್ಳ ರೋಗಿ ಅರೆಸ್ಟ್..!

ಈ ಸುದ್ದಿಯನ್ನು ಶೇರ್ ಮಾಡಿ

Gold-01

ಢಾಕಾ, ಆ.7-ಗಾಲಿಕುರ್ಚಿಯ ಮೂಲಕ 26 ಕೆಜಿ ಚಿನ್ನವನ್ನು ಕಳ್ಳಸಾಗಣೆ ಮಾಡಲು ಯತ್ನಿಸಿದ ವ್ಯಕ್ತಿಯನ್ನು ಬಾಂಗ್ಲಾದೇಶದ ರಾಜಶಾನಿ ಢಾಕಾದ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಬಂಧಿಸಲಾಗಿದೆ. ಬಾಂಗ್ಲಾದಲ್ಲಿ ಈ ವರ್ಷ ಪತ್ತೆಯಾದ ಅತಿ ದೊಡ್ಡ ಪ್ರಮಾಣದ ಚಿನ್ನ ಕಳ್ಳಸಾಗಣೆ ಪ್ರಮಾಣ ಇದಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.

ಚಿನ್ನ ಕಳ್ಳಸಾಗಣೆ ಮಾಡಲು ಯತ್ನಿಸಿದ ಆರೋಪಿ ಜಮಿಲ್ ಅಖ್ತರ್ ಸಿಂಗಪುರ್‍ನಿಂದ ಢಾಕಾ ಏರ್ಪೋರ್ಟ್ ಗೆ ಬಂದಿಳಿದಿದ್ದನು. ವಿಕಲಚೇತರು ಉಪಯೋಗಿಸುವ ಗಾಲಿಕುರ್ಚಿಯಲ್ಲಿದ್ದ ಆತ 12.5 ಕೋಟಿ ಟಾಕಾ(ಬಾಂಗ್ಲಾ ಕರೆನ್ಸಿ) ಮೌಲ್ಯದ 250 ಗ್ರಾಂ ಚಿನ್ನದ ಗಟ್ಟಿಗಳನ್ನು ತನ್ನ ಕಾಲುಗಳ ನಡುವೆ ವೀಲ್‍ಚೇರ್ ಪುಟ್‍ರೆಸ್ಟ್ ಮೇಲೆ ಇರಿಸಲಾಗಿದ್ದ ಚೀಲವೊಂದರಲ್ಲಿ ಬಚ್ಚಿಟ್ಟಿದ್ದನು.

ಅಸ್ವಸ್ಥನಂತೆ ನಟಿಸುತ್ತಿದ್ದ ಅಖ್ತರ್ ಗಾಲಿಕುರ್ಚಿ ಮೂಲಕ ತಪಾಸಣೆರಹಿತ ದ್ವಾರವನ್ನು ದಾಟಿ ಹೋಗಲು ಯತ್ನಿಸುತ್ತಿದ್ದಾಗ, ಅನುಮಾನಗೊಂಡ ಸೀಮಾಸುಂಕ ಆಧಿಕಾರಿಗಳು ಆತನನ್ನು ತಡೆದು ಪರಿಶೀಲಿಸಿದಾಗ 25 ಕೆಜಿ ಚಿನ್ನದ ಬಾರ್‍ಗಳು ಪತ್ತೆಯಾಯಿತು. ಆತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಲಾಗಿದೆ.

Facebook Comments

Sri Raghav

Admin