ಗ್ರೇಟ್ ಕಾಲಿ ಜೊತೆ ಕ್ಯಾಪ್ಟನ್ ಕೊಹ್ಲಿ ..!

Khali--01

ಇದೊಂದು ಅಪರೂಪದ ಭೇಟಿ; ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಕ್ರಿಕೆಟ್ ಕಲಿಗಳಲ್ಲಿ ನಡುಕ ಹುಟ್ಟಿಸಿರುವ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೋಹ್ಲಿ ಮತ್ತು ವಿಶ್ವದ ಮಹಾ ದಾಂಢಿಗರನ್ನು ಕುಸ್ತಿ ಅಖಾಡದಲ್ಲಿ ನೆಲಕುರುಳಿಸಿ ಡಬ್ಲ್ಯೂಡಬ್ಲ್ಯೂಎಫ್ ಚಾಂಪಿಯನ್ ಆಗಿದ್ದ ಗ್ರೇಟ್ ಕಾಲಿ ಪರಸ್ಪರ ಭೇಟಿಯಾದ ಕ್ಷಣವಿದು. ಗ್ರೇಟ್ ಕಾಲಿಯನ್ನು ಭೇಟಿಯಾಗಿದ್ದು, ನಿಜಕ್ಕೂ ಗ್ರೇಟ್, ಎಂಥ ಅದ್ಭುತ ವ್ಯಕ್ತಿ ಆತ… ಎಂದು ಕೋಹ್ಲಿ ಬಣ್ಣಿಸಿದ್ದಾರೆ. ಕಾಲಿಯನ್ನು ತಾವು ಭೇಟಿಯಾದ ಫೋಟೋಗಳನ್ನು ಕೋಹ್ಲಿ ಟ್ವೀಟ್ ಮಾಡಿದ್ದಾರೆ. ಈ ಇಬ್ಬರು ದಿಗ್ಗಜರ ಫೋಟೋ ಅಭಿಮಾನಿಗಳಲ್ಲಿ ಅಪಾರ ಸಂತಸ ಮೂಡಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin