ಡಿಕೆಶಿ ಮನೆ ಮೇಲೆ ಸಂದರ್ಭೋಚಿತ ಐಟಿ ದಾಳಿಗೆ ಒಕ್ಕಲಿಗರ ಸಂಘ ವಿರೋಧ

DK-Shivakumar-01

ಬೆಂಗಳೂರು, ಆ.7-ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ನಿವಾಸ, ಕಚೇರಿಗಳ ಮೇಲೆ ನಡೆದ ಸಂದರ್ಭೋಚಿತ ಐಟಿ ದಾಳಿಯನ್ನು ವಿರೋಧಿಸಿರುವ ರಾಜ್ಯ ಒಕ್ಕಲಿಗರ ಸಂಘ ಈ ಬಗ್ಗೆ ಶೀಘ್ರ ಇತ್ಯರ್ಥಗೊಳಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದೆ.ಒಕ್ಕಲಿಗರ ಸಂಘದ ಅಧ್ಯಕ್ಷ ಬೆಟ್ಟೇಗೌಡ ಈ ಸಂಜೆಯೊಂದಿಗೆ ಮಾತನಾಡಿ, ರಾಜಕೀಯ ದುರುದ್ದೇಶದಿಂದ ನಡೆದಿರುವ ಐಟಿ ದಾಳಿಯನ್ನು ಖಂಡಿಸುವುದಾಗಿ ಹೇಳಿದ್ದಾರೆ.

ಡಿ.ಕೆ.ಶಿವಕುಮಾರ್ ಅವರು ಉದ್ಯಮಿ ಹಾಗೂ ರಾಜಕಾರಣಿಯಾಗಿದ್ದಾರೆ. ಐಟಿ ದಾಳಿಯನ್ನು ನಾವು ವಿರೋಧಿಸುತ್ತಿಲ್ಲ. ಆದರೆ ಗುಜರಾತ್ ಕಾಂಗ್ರೆಸ್ ಶಾಸಕರನ್ನು ರಕ್ಷಣೆ ಮಾಡಿದ ಕಾರಣಕ್ಕಾಗಿ ಐಟಿ ದಾಳಿ ನಡೆಸಿದ್ದು, ನಮ್ಮ ಸಮುದಾಯವನ್ನು ಕೆರಳಿಸಿದೆ ಎಂದು ಅವರು ಹೇಳಿದರು. ಡಿ.ಕೆ.ಶಿವಕುಮಾರ್ ಅವರು ಕಾಲಕಾಲಕ್ಕೆ ತಕ್ಕಂತೆ ತೆರಿಗೆ ಪಾವತಿಸಿದ್ದಾರೆ. ಅನಗತ್ಯವಾಗಿ ಐಟಿ ದಾಳಿ ನಡೆದಿರುವುದು ಅನುಮಾನ ಮೂಡಿಸುತ್ತದೆ. ಶೀಘ್ರ ವಿಚಾರಣೆ ನಡೆಸಿ ಪ್ರಕರಣವನ್ನು ಇತ್ಯರ್ಥ ಪಡಿಸಬೇಕು. ಇಲ್ಲದಿದ್ದರೆ ಈ ಸಂಬಂಧ ನಾವು ಹೋರಾಟ ನಡೆಸಬೇಕಾಗುತ್ತದೆ ಎಂದು ಹೇಳಿದರು. ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್, ಎಸ್.ರವಿ ಇವರ ಮೇಲೆ ಐಟಿ ದಾಳಿ ನಡೆದಿರುವುದು ನೋಡಿದರೆ ದುರುದ್ದೇಶದ ದಾಳಿ ಎಂದೆನಿಸುತ್ತದೆ ಎಂದು ಆರೋಪಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin