ತಿಮ್ಮಪ್ಪನ ದರ್ಶನ ಪಡೆದ ಚುನಾಯಿತ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು

ಈ ಸುದ್ದಿಯನ್ನು ಶೇರ್ ಮಾಡಿ

Venkaiha--01

ತಿರುಪತಿ,ಆ.7- ಚುನಾಯಿತ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು ತಮ್ಮ ಕುಟುಂಬದೊಂದಿಗೆ ಇಂದು ತಿರುಪತಿಗೆ ಭೇಟಿ ನೀಡಿ ತಿಮ್ಮಪ್ಪನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.  ನಿನ್ನೆ ರಾತ್ರಿ ವೆಂಕಯ್ಯ ನಾಯ್ಡು ಬೆಂಗಳೂರಿನಿಂದ ನೇರವಾಗಿ ವಿಶೇಷ ವಿಮಾನದಲ್ಲಿ ಇಲ್ಲಿನ ರೇಣಿಗುಂಟ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ತಿರುಪತಿ ಶಾಸಕಿ ಸುಗಣಮ್ಮ, ಜಿಲ್ಲಾಧಿಕಾರಿ ಗಿರಿಷಾ, ಎಸ್‍ಪಿ ಅಭಿಶೇಕ್ ಮಹೊಂತಿ ಮತ್ತಿರರು ಉಪರಾಷ್ಟ್ರಪತಿ ಅವರನ್ನು ಬರಮಾಡಿಕೊಂಡರು.

ನಂತರ ಇಲ್ಲಿಂದ ವೆಂಕಯ್ಯ ನಾಯ್ಡು ತಿರುಪತಿಗೆ ರಸ್ತೆ ಮಾರ್ಗವಾಗಿ ಬಂದರು. ಇಂದು ಬೆಳಗ್ಗೆ ದೇಗುಲಕ್ಕೆ ಭೇಟಿ ನೀಡಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಾವು ಉಪರಾಷ್ಟ್ರಪತಿಯಾಗಿ ಆಯ್ಕೆ ಆಗಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಿಂಬಿಸುತ್ತಿದೆ. ನಾನು ಉಪರಾಷ್ಟ್ರಪತಿ ಹುದ್ದೆಯೆ ಗೌರವ ಮತ್ತು ಘನತೆಯನ್ನು ಎತ್ತಿ ಹಿಡಿಯುತ್ತೇನೆ ಎಂದರು.  ನಾನೀಗ ಬಿಜೆಪಿ ವ್ಯಕ್ತಿಯಲ್ಲ. ನಾನು ಈಗಾಗಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಮುಂದಿನ 2-3 ದಿನಗಳಲ್ಲಿ ಬಿಜೆಪಿ ಸಂಸದ ಸ್ಥಾನಕ್ಕೂ ರಾಜೀನಾಮೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.

ಜನರ ಪೀತಿ ಮತ್ತು ತಿಮ್ಮಪ್ಪನ ಆಶೀರ್ವಾದ ನಾನು ಈ ಮಟ್ಟಕ್ಕೆ ಬರಲು ಕಾರಣ. ಅಲ್ಲದೇ, ನಾನು ಈ ಮಟ್ಟಕ್ಕೆ ಬೆಳೆಯಲು ವೆಂಕಟೇಶ್ವರನ ಆಶೀರ್ವಾದವೇ ಕಾರಣ. ಇಂದಿನಿಂದ ನನ್ನ ಜೀವನದ ಎರಡನೇ ಅಧ್ಯಾಯ ಆರಂಭಿಸಲಾಗಿದೆ. ಇದು ಸಂಪೂರ್ಣ ರಾಜಕೀಯದಿಂದ ಹೊರತಾಗಿರುತ್ತದೆ ಎಂದು ವೆಂಕಯ್ಯ ನಾಯ್ಡು ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin