ದೆಹಲಿಯಲ್ಲಿ ಮ್ಯಾನ್‍ಹೋಲ್‍ಗೆ ಮೂವರು ಬಲಿ

Delhi--01

ನವದೆಹಲಿ, ಆ.7- ದಕ್ಷಿಣ ದೆಹಲಿಯ ಘೀತೋರ್ನಿ ಪ್ರದೇಶದಲ್ಲಿ ಟ್ಯಾಂಕ್ ಸ್ವಚ್ಛಗೊಳಿಸುತ್ತಿದ್ದಾಗ ಉಸಿರುಗಟ್ಟಿ ಮೂವರು ಕಾರ್ಮಿಕರು ಮೃತಪಟ್ಟ ದುರ್ಘಟನೆ ನೆನೆಪಿನಲ್ಲಿರುವಾಗಲೇ ಅದೇ ರೀತಿಯ ಇನ್ನೊಂದು ದುರಂತ ರಾಜಧಾನಿಯಲ್ಲಿ ನಡೆದಿದೆ. ದೆಹಲಿಯ ಲಜ್‍ಪತ್ ನಗರದಲ್ಲಿ ಒಳಚರಂಡಿಯೊಂದರ ಶುಚಿತ್ವದಲ್ಲಿ ತೊಡಗಿದ್ದ ಮೂವರು ಸ್ವಚ್ಛತಾ ಕಾರ್ಮಿಕರು ಮೃತಪಟ್ಟಿದ್ದಾರೆ. ನಿನ್ನೆ ಮಧ್ಯಾಹ್ನ 1 ಗಂಟೆಯಲ್ಲಿ ಈ ದುರಂತ ಸಂಭವಿಸಿದೆ.

ಕಬೀರ್ ರಾಮ್ ದೇವಸ್ಥಾನದ ಸಮೀಪ ಲಜ್‍ಪತ್ ನಗರದಲ್ಲಿ ಮ್ಯಾನ್‍ಹೋಲ್ ಮತ್ತು ಒಳಚರಂಡಿ ಮಾರ್ಗದ ಸ್ವಚ್ಛತಾ ಕಾರ್ಯದಲ್ಲಿ ಮೂವರು ಕಾರ್ಮಿಕರು ತೊಡಗಿದ್ದರು. ಈ ಸಂದರ್ಭದಲ್ಲಿ ವಿಷಯುಕ್ತ ಗಾಳಿಯಿಂದ ಅವರು ಪ್ರಜ್ಞಾಶೂನ್ಯರಾದರು. ತಕ್ಷಣ ಅವರನ್ನು ಎಐಐಎಂಎಸ್ ಟ್ರೌಮಾ ಸೆಂಟರ್‍ಗೆ ದಾಖಲಿಸಲಾಯಿತು. ಆದರೆ ಆಸ್ಪತ್ರೆಗೆ ಕರೆತರುವುದಕ್ಕೆ ಮುನ್ನವೇ ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದರು.  ಮೃತರಲ್ಲಿ ಇಬ್ಬರನ್ನು ಜೋಗಿಂದರ್(32) ಮತ್ತು ಅನ್ನು(28) ಎಂದು ಗುರುತಿಸಲಾಗಿದೆ. ಮತ್ತೊಬ್ಬ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin